ಮೈಸೂರಲ್ಲಿ ನಡೆಯುತ್ತಿದೆ ಕಟ್ಟುನಿಟ್ಟಿನ ವಾಹನ ತಪಾಸಣೆ

ಮೈಸೂರಲ್ಲಿ ನಡೆಯುತ್ತಿದೆ ಕಟ್ಟುನಿಟ್ಟಿನ ವಾಹನ ತಪಾಸಣೆ

MY   ¦    Sep 10, 2019 09:59:00 AM (IST)
ಮೈಸೂರಲ್ಲಿ ನಡೆಯುತ್ತಿದೆ ಕಟ್ಟುನಿಟ್ಟಿನ ವಾಹನ ತಪಾಸಣೆ

ಮೈಸೂರು: ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಪರಿಷ್ಕರಿಸಿರುವ ನೂತನ ದಂಡದ ಮೊತ್ತವನ್ನು ಈಗಾಗಲೇ ಮೈಸೂರು ನಗರಾದ್ಯಂತ ಜಾರಿಗೊಳಿಸಲಾಗಿರುವುದರಿಂದ ಇದೀಗ ಸವಾರರು, ಚಾಲಕರು ಕಾನೂನು ಪಾಲನೆ ಮಾಡುವುದು ಅನಿವಾರ್ಯವಾಗಿದ್ದು, ಕೆಲವರು ಸಂಚಾರಿ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿರುವುದು ಕಂಡು ಬರುತ್ತಿದೆ.

 

ಕೆಲವೆಡೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ವೇಗವಾಗಿ ಸಂಚರಿಸುವುದು, ಬೈಕ್‍ನಲ್ಲಿ ಮೂವರನ್ನು ಕೂರಿಸಿಕೊಂಡು ಹೋಗುವುದು, ಹೆಲ್ಮೆಟ್ ಧರಿಸದಿರುವುದು ನಡೆಯುತ್ತಲೇ ಇದೆ. ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಪೊಲೀಸರು ತಪಾಸಣೆ ನಡೆಸುವುದರಿಂದ ಬಹಳಷ್ಟು ಮಂದಿ ಪೊಲೀಸರನ್ನು ಕಂಡ ಕೂಡಲೇ ಗಲ್ಲಿಗಳ ಮೂಲಕ ತಪ್ಪಿಸಿಕೊಂಡು ಓಡಿ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಬಹಳಷ್ಟು ಚಾಲಕರು, ಸವಾರರು ಡ್ರೈವಿಂಗ್ ಲೈಸನ್ಸ್ ಹೊಂದಿಲ್ಲ. ಜತೆಗೆ ವಾಹನಗಳಿಗೂ ಸರಿಯಾದ ದಾಖಲೆಗಳಿಲ್ಲ. ವಿಮೆ ಕಟ್ಟದೆ ಹೀಗೆ ಕಾನೂನಾತ್ಮಕವಾಗಿ ಯಾವುದನ್ನು ಪಾಲನೆ ಮಾಡದೆ ಓಡಾಡಿಕೊಂಡಿದ್ದವರು ಮಾತ್ರ ಈಗ ಭಯ ಪಡುತ್ತಿದ್ದರೆ, ಉಳಿದಂತೆ ಸಮರ್ಪಕ ದಾಖಲೆಹೊಂದಿದವರು ಮಾಮೂಲಿನಂತೆ ಓಡಾಡಿಕೊಂಡಿದ್ದಾರೆ.

 

ಈಗಾಗಲೇ  ವಾಹನ ಚಾಲಕರು, ಸವಾರರು ಹಾಗೂ ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಸೂಚಿಸಿದ್ದಾರೆ.

ಮೋಟಾರು ವಾಹನ ಕಾಯ್ದೆ ಅಧಿನಿಯಮ 1988ಕ್ಕೆ ತಿದ್ದುಪಡಿ ಮಾಡಿ ಸಂಚಾರ ನಿಯಮ ಉಲ್ಲಂಘನೆಗಳಿಗೆ ಹಾಲಿ ಇದ್ದ ದರಗಳನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದ್ದು, ಪರಿಷ್ಕøತ ದಂಡ ಮೊತ್ತಗಳನ್ನು ಜಾರಿಗೆ ತರುವಂತೆ ನಿರ್ದೇಶಿಸಿದೆ ಎಂದಿರುವ ಅವರು

ಪರಿಷ್ಕøತ ದಂಡದ ಮೊತ್ತದ ಬಗ್ಗೆ ಮಾಹಿತಿ ನೀಡಿದ್ದು ಅದು ಹೀಗಿದೆ.

 

ಪಾಸ್ ಅಥವಾ ಟಿಕೆಟ್ ಇಲ್ಲದೇ ಪ್ರಯಾಣಿಸುವುದಕ್ಕೆ 100 ಇದ್ದ ದಂಡವನ್ನು 500ಕ್ಕೆ ಹೆಚ್ಚಿಸಲಾಗಿದೆ. ಕಂಡಕ್ಟರ್‍ನ ಕಡೆಯಿಂದ ಕರ್ತವ್ಯ ಲೋಪಕ್ಕೆ (ಟಿಕೆಟ್ ನೀಡದೇ ಇರುವುದು) 50. ಆದೇಶಗಳ ಪಾಲನೆಗೆ ಅಸಹಕಾರ ತೋರುವುದು, ಅಡಚಣೆ ಮಾಡುವುದು, ಮಾಹಿತಿ ನೀಡಲು ನಿರಾಕರಿಸಿದರೆ 2 ಸಾವಿರ ದಂಡ ಅಥವಾ 1 ತಿಂಗಳ ಜೈಲು ಶಿಕ್ಷೆ ಅಥವಾ ಎರಡು.

ಅನಧಿಕೃತ ವ್ಯಕ್ತಿಗಳಿಗೆ ವಾಹನಗಳನ್ನು ಓಡಿಸಲು ಅವಕಾಶ ಮಾಡಿಕೊಡುವುದು (ಚಾಲನಾ ಪರವಾನಗಿ ಇಲ್ಲದೇ ಇರುವವರಿಗೆ ಅಥವಾ ಅಪ್ರಾಪ್ತರಿಗೆ ವಾಹನ ಚಾಲನೆಗೆ ವಾಹನ ನೀಡುವುದು) 5 ಸಾವಿರ ದಂಡ ಅಥವಾ 3 ತಿಂಗಳ ಜೈಲು ಅಥವಾ ಎರಡು. ಸೆಕ್ಷನ್-3 ಅಥವಾ 4ಕ್ಕೆ ವಿರುದ್ಧವಾಗಿ ವಾಹನಗಳನ್ನು ಚಾಲನೆ ಮಾಡುವುದು (ಚಾಲನಾ ಪರವಾನಗಿ ಇಲ್ಲದೇ ಅಥವಾ ಅಪ್ರಾಪ್ತರು ವಾಹನ ಚಾಲನೆ ಮಾಡುವುದು) 5 ಸಾವಿರ ದಂಡ ಅಥವಾ 3 ತಿಂಗಳು ಜೈಲು ಅಥವಾ ಎರಡು.

ಚಾಲನಾ ಪರವಾನಗಿಗೆ ಸಂಬಂಧಿಸಿದ ಅಪರಾಧÀಗಳು (ಚಾಲನಾ ಪರವಾನಗಿ, ಅನರ್ಹಗೊಳಿಸಿದ ಅಥವಾ ರದ್ದುಗೊಳಿಸಿದ ಅವಧಿಯಲ್ಲಿ ವಾಹನ ಚಾಲನೆ)- 10 ಸಾವಿರ ದಂಡ ಅಥವಾ 3 ತಿಂಗಳ ಜೈಲು ಅಥವಾ ಎರಡು. ಮೋಟಾರು ವಾಹನಗಳ ನಿರ್ಮಾಣ, ನಿರ್ವಹಣೆ, ಮಾರಾಟ  ಬದಲಾವಣೆಗಳಿಗೆ ಸಂಬಂಧಿಸಿದ ಅಪರಾಧಗಳಿಗೆ ಶಿಕ್ಷೆ (ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ವ್ಯತಿರಿಕ್ತವಾಗಿ ನಿರ್ಮಾಣ, ಬದಲಾವಣೆ ಇತ್ಯಾದಿ) 1 ಲಕ್ಷ ದಂಡ ಅಥವಾ 3 ತಿಂಗಳು ಜೈಲು ಅಥವಾ ಎರಡು.

ಸೆಕ್ಷನ್-62(ಎ)ಯ ಉಲ್ಲಂಘನೆಗೆ ಶಿಕ್ಷೆ (ಕೇಂದ್ರ ಸರ್ಕಾರ ವಾಹನಗಳ ಬಗ್ಗೆ ನಿರ್ಧರಿಸಿದ ನಿಯಮಗಳ ಉಲ್ಲಂಘನೆ)- 10 ಸಾವಿರ ಅಥವಾ 3 ತಿಂಗಳ ಜೈಲು ಅಥವಾ ಎರಡು. ಅತಿಯಾದ ವೇಗದ ಚಾಲನೆ, ಅತಿವೇಗದ ಚಾಲನೆ ಎಂದು ಗೊತ್ತಿದ್ದರೂ ಚಾಲಕನಿಗೆ ತಿಳವಳಿಕೆ ನೀಡದೇ ಇರುವುದಕ್ಕೆ 2 ಸಾವಿರ, 4 ಸಾವಿರ.

ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ (ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಫೆÇೀನ್ ಬಳಕೆ)- ಮೊದಲ ಸಲ 5 ಸಾವಿರ ದಂಡ ಅಥವಾ 6 ತಿಂಗಳು ಜೈಲು ಅಥವಾ ಎರಡು. ಎರಡನೇ ಸಲಕ್ಕೆ 10 ಸಾವಿರ ದಂಡ, ಪುನರಾವರ್ತನೆಗೆ 2 ವರ್ಷ ಜೈಲು. ದೈಹಿಕ  ಮಾನಸಿಕ ಅಸಮರ್ಥರು ವಾಹನ ಚಾಲನೆ ಮಾಡುವುದು- ಮೊದಲ ಸಲಕ್ಕೆ 1 ಸಾವಿರ, 2ನೇ ಬಾರಿಗೆ 2 ಸಾವಿರ.

ಸಾರ್ವಜನಿಕ ರಸ್ತೆಯಲ್ಲಿ ರೇಸಿಂಗ್ ವೇಗಗಳ ಪ್ರಯೋಗ ಮಾಡುವುದು- ಮೊದಲ ಸಲ 5 ಸಾವಿರ ದಂಡ, 2ನೇ ಸಲ 10 ಸಾವಿರ ದಂಡ, ಮುಂದುವರೆದರೆ ದಂಡದ ಜೊತೆಗೆ 1 ತಿಂಗಳು ಜೈಲು. ಸುಸ್ಥಿತಿಯಲ್ಲಿ ಇಲ್ಲದ ವಾಹನಗಳನ್ನು ಬಳಸುವುದು (ಎಫ್‍ಸಿ ಇಲ್ಲದೇ ಇರುವುದು ಉದಾ: ಶಬ್ದ ನಿಯಂತ್ರಣ ಮತ್ತು  ಹೊಗೆ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಹೊಂದದೇ ಇರುವುದು)- 10 ಸಾವಿರ ದಂಡ.

ನೋಂದಣಿ ಮಾಡಿಸದ ವಾಹನಗಳನ್ನು ಚಾಲನೆ ಮಾಡುವುದಕ್ಕೆ ಮೊದಲ ಸಲ 5 ಸಾವಿರ, 2ನೇ ಸಲಕ್ಕೆ 10 ಸಾವಿರ ದಂಡ, ಉಲ್ಲಂಘನೆ ಮುಂದುವರೆದರೇ ದಂಡದೊಂದಿಗೆ 1 ವರ್ಷ ಜೈಲು.  ಪರ್ಮಿಟ್ ಇಲ್ಲದೇ ಸರಕು ಸಾಗಣೆ ವಾಹನಗಳನ್ನು ಚಾಲನೆ ಮಾಡುವುದು ಹಾಗೂ ಪರ್ಮಿಟ್ ಷರತ್ತುಗಳ ಉಲ್ಲಂಘಿಸಿದರೇ 10 ಸಾವಿರ ದಂಡ, ಮುಂದುವರೆಸಿದರೆ 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

 

ನಿಗಧಿಗಿಂತ ಹೆಚ್ಚಿನ ಭಾರವನ್ನು ಸಾಗಣೆ ಮಾಡುವುದು (ನೋಂದಣಿ ಪತ್ರದಲ್ಲಿ ನಿಗಧಿಪಡಿಸಿರುವ ವಾಹನದ ಖಾಲಿ ತೂಕಕ್ಕಿಂತ ಹೆಚ್ಚುವರಿ ತೂಕ ಇರುವ ಅಥವಾ ನೋಂದಣಿ ಪತ್ರದಲ್ಲಿ ನಿರ್ದಿಷ್ಟ ಪಡಿಸಿರುವ ಭರ್ತಿ ವಾಹನದ ತೂಕಕ್ಕಿಂತ ಹೆಚ್ಚುವರಿ ತೂಕವನ್ನು ಹೊಂದಿರುವುದು)- 20 ಸಾವಿರ.

ನಿಗಧಿ ಮೀರಿ ಹೆಚ್ಚುವರಿ ಪ್ರಯಾಣಿಕರ ಸಾಗಣೆ- ಪ್ರತಿ ಪ್ರಯಾಣಿಕರಿಗೆ 200 ದಂಡ. ಮೋಟಾರು ಸೈಕಲ್ ಚಾಲಕರು ಮತ್ತು ಹಿಂಬದಿ ಸವಾರರ ಸುರಕ್ಷತಾ ಕ್ರಮಗಳ ಉಲ್ಲಂಘನೆ (ಮೋಟಾರು ವಾಹನದಲ್ಲಿ ಸರಕು ಸಾಗಣೆ ಮಾಡುವುದು ಮತ್ತು ಹಿಂಬದಿ ಸವಾರರು ಹೆಚ್ಚು ಇರುವುದು) 1 ಸಾವಿರ ದಂಡ. ವಿಮೆ ಇಲ್ಲದೇ ವಾಹನ ಚಾಲನೆ- ಮೊದಲ ಸಲ 2 ಸಾವಿರ, 2ನೇ ಸಲ 4 ಸಾವಿರ, ಮುಂದುವರೆದರೇ ದಂಡದೊಂದಿಗೆ 3 ತಿಂಗಳು ಜೈಲು.

ಅನಧಿಕೃತ ವ್ಯಕ್ತಿಗಳು ವಾಹನಗಳ ಒಳಗೆ ಪ್ರವೇಶ ಮಾಡಿ ಯಾಂತ್ರಿಕ ಭಾಗಗಳನ್ನು ಅಸ್ತವ್ಯಸ್ತಗೊಳಿಸುವುದು.

 

ಜತೆಗೆ 1 ಸಾವಿರ, ಸಾಮಾನ್ಯ ಅಪರಾಧÀಗಳು  (ನಿಗಧಿಪಡಿಸದ ಅಪರಾಧಗಳಿಗೆ ದಂಡ)- ಮೊದಲ ಸಲ 500, 2ನೇ ಸಲಕ್ಕೆ 1500 ದಂಡ. ಸೀಟ್ ಬೆಲ್ಟ್ ಧರಿಸದಿದ್ದರೇ- 1 ಸಾವಿರ. ಹೆಲ್ಮೆಟ್ ಧÀರಿಸದೇ ವಾಹನ ಚಾಲನೆಗೆ 1 ಸಾವಿರ. ತುರ್ತು ವಾಹನಗಳಿಗೆ ದಾರಿ ಬಿಡದೆ ಅಡಚಣೆ ಮಾಡಿದರೆ 10 ಸಾವಿರ. ನಿಶಬ್ದ ವಲಯದಲ್ಲಿ ಹಾರ್ನ್ ಬಳಕೆ- ಮೊದಲ ಸಲ 1 ಸಾವಿರ, 2ನೇ ಸಲ 2 ಸಾವಿರವನ್ನು ವಿಧಿಸಲಾಗುವುದಾಗಿ ಹೇಳಿದ್ದಾರೆ.