ಕುಮಾರಸ್ವಾಮಿ ಗೆಲುವಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಕುಮಾರಸ್ವಾಮಿ ಗೆಲುವಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

MH   ¦    Apr 16, 2018 03:26:56 PM (IST)
 ಕುಮಾರಸ್ವಾಮಿ ಗೆಲುವಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಮೈಸೂರು: ಚುನಾವಣೆಯಲ್ಲಿ ಯಾರು ಗೆಲ್ಲಬೇಕು ಎಂಬುದನ್ನ ಜನ ತೀರ್ಮಾನ ಮಾಡುತ್ತಾರೆ. ಓಟುಗಳು ಕುಮಾರಸ್ವಾಮಿ ಜೇಬಿನಲ್ಲಿ ಅಥವಾ ನನ್ನ ಜೇಬಿನಲ್ಲಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಇಂದು ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಮೈಸೂರಿಗೆ ಆಗಮಿಸಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಸಿಎಂ ಒಂದು ದಿನ ಅಲ್ಲಾ, ಒಂದು ತಿಂಗಳು ಬಂದು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ಗೆಲುವು ನನಗೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಪ್ರಜಾಪ್ರಭುತ್ವದಲ್ಲಿ ಚುನಾವಣೆ ಯಾರು ಗೆಲ್ಲಬೇಕು ಎಂಬುದನ್ನು ತೀರ್ಮಾನ ಮಾಡುವವರು ಜನರು. ಓಟುಗಳು ಕುಮಾರಸ್ವಾಮಿ ಅಥವಾ ನನ್ನ ಜೇಬಿನಲ್ಲಿ ಇಲ್ಲ ಎಂದು ತಿರುಗೇಟು ನೀಡಿದ ಸಿಎಂ, ಕುಮಾರಸ್ವಾಮಿ ಕಳೆದ ಲೋಕಾಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸೋತರೂ, ಅವರ ಹೆಂಡತಿ ರಾಮನಗರದ ಪಕ್ಕದ ಕ್ಷೇತ್ರ ಚೆನ್ನಪಟ್ಟಣದಲ್ಲಿ ಸೋಲ್ಲಲಿವೇ ಎಂದರು.

ಕುಮಾರಸ್ವಾಮಿ ಕಳೆದ ಎರಡು ದಿನಗಳಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಅವರು ಪಕ್ಷದ ಅಧ್ಯಕ್ಷರಾಗಿದ್ದಾರೆ, ಅವರು ಪ್ರಚಾರ ಮಾಡಲಿ. ಚಾಮುಂಡೇಶ್ವರಿ ಉಪಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರೂ. ಆವಾಗ ಗೆಲ್ಲಲು ಆಗಲಿಲ್ಲ. ಆಗ ಗೆದಿದ್ದು ನಾನು, ಈಗಲೂ ನಾನೇ ಗೆಲ್ಲುತ್ತೇನೆ ಎಂದರು.

ಬಾದಾಮಿ ಸ್ಪರ್ಧೆ ಬಗ್ಗೆ ಹೇಳಿದ್ದೇನು?
ನಾನು ಎಲ್ಲಿಯೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಲ್ಲ. ಎಲ್ಲಾ ಮಾಧ್ಯಮಗಳ ಸೃಷ್ಟಿ. ಅಲ್ಲಿಯಾ ಜನ ಬಂದು ಕೇಳಿದರೂ ಅಷ್ಟೇ. ಇಷ್ಟು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ, ಯಾವಾಗಲಾದರೂ 2 ಕಡೆ ಸ್ಪರ್ಧೆ ಮಾಡಿದ್ದೀನಾ? ಎಂದು ಪ್ರಶ್ನಿಸಿದ ಸಿಎಂ, ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಇದೇ ತಿಂಗಳ 20 ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದರು.

ಈ ಬಾರಿ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಬೆಂಗಳೂರಿನ ಸಿ.ವಿ ರಾಮನ್ ನಗರದಿಂದ ಟಿಕೆಟ್ ಕೇಳಿದ್ದರು. ಆದರೆ ಅವರನ್ನು ನಾನೇ ಕರೆದು ಮಾತನಾಡಿದ್ದು, ಈ ಬಾರಿ ಬೇಡ ಎಂದು ಹೇಳಿದ್ದೆ. ಇನ್ನೂ ಸಚಿವ ಮಹದೇವಪ್ಪ ನಾನೂ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೇ ಮಾಡುವುದಿಲ್ಲ, ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ ಎಂದಿದ್ದರೂ. ಅವರನ್ನ ಮನವೊಲಿಸಿ ಟಿ.ನರಸೀಪುರದಿಂದ ಸ್ಪರ್ಧೆ ಮಾಡುವಂತೆ ನಾನೇ ಹೇಳಿದ್ದೇನೆ ಎಂದರು.

ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಕೆಲವರಿಗೆ ಅಸಮಾನಧಾನವಾಗಿರುವದು ಮೌನವಾಗಿರುವುದು ನಿಜ. ಅವರನ್ನು ಮಾತನಾಡಿಸುತ್ತೇನೆ. 20ರ ನಂತರ ರಾಜ್ಯಾಧ್ಯಂತ ಪ್ರಚಾರ ಮಾಡುತ್ತೇನೆ ಎಂದರು.