ಬೈಕ್ ಸ್ಕಿಡ್ ಆಗಿ ಬಿದ್ದ ವಿದ್ಯಾರ್ಥಿ ಸಾವು

ಬೈಕ್ ಸ್ಕಿಡ್ ಆಗಿ ಬಿದ್ದ ವಿದ್ಯಾರ್ಥಿ ಸಾವು

MY   ¦    Feb 11, 2019 02:46:58 PM (IST)
ಬೈಕ್ ಸ್ಕಿಡ್ ಆಗಿ ಬಿದ್ದ ವಿದ್ಯಾರ್ಥಿ ಸಾವು

ಮೈಸೂರು: ಬೈಕ್ ಚಾಲನೆಯಲ್ಲಿ ನಿಯಂತ್ರಣ ಕಳೆದುಕೊಂಡು ವಿದ್ಯಾರ್ಥಿಯೊಬ್ಬ ಬೈಕ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಘಟನೆ ಹುಣಸೂರು ರಸ್ತೆಯ ಕಲಾಮಂದಿರ ಅಪಾರ್ಟಮೆಂಟ್ ಎದುರಿನ ತಿರುವಿನಲ್ಲಿ ನಡೆದಿದೆ. ಮೃತನನ್ನು ಕೇರಳ ಮೂಲದ ಜೋಷಿ ಎಂಬವರ ಪುತ್ರ ಆನಂದ್(22)ಎಂದು ಗುರುತಿಸಲಾಗಿದೆ.

ಇವರು ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿದ್ದರು. ಪಿಜಿಯಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ರಾತ್ರಿ ಕಲಾಮಂದಿರದ ಕಡೆಯಿಂದ ಪಡುವಾರಹಳ್ಳಿ ಕಡೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ.

ವಿವಿಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ