ಚರಂಡಿಯಲ್ಲಿದ್ದ ನವಜಾತ ಶಿಶು ರಕ್ಷಣೆ

ಚರಂಡಿಯಲ್ಲಿದ್ದ ನವಜಾತ ಶಿಶು ರಕ್ಷಣೆ

LK   ¦    Apr 15, 2018 05:08:54 PM (IST)
ಚರಂಡಿಯಲ್ಲಿದ್ದ ನವಜಾತ ಶಿಶು ರಕ್ಷಣೆ

ಗುಂಡ್ಲುಪೇಟೆ: ಪಟ್ಟಣದ ಬಡಾವಣೆಯೊಂದರ ಚರಂಡಿಯಲ್ಲಿ ಎಸೆದು ಹೋಗಿದ್ದ ನವಜಾತ ಹೆಣ್ಣುಮಗುವನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಪೌರ ಸಿಬ್ಬಂದಿ ಜೀವವುಳಿಸಿದ್ದಾರೆ.

ಪಟ್ಟಣದ ಕುರುಬಗೇರಿ ಬಡಾವಣೆಗೆ ಸ್ವಚ್ಛತೆಗೆ ತೆರಳಿದ ರಮ್ಯಾ ಎಂಬ ಪೌರಕಾರ್ಮಿಕ ಮಹಿಳೆಗೆ ಸಮೀಪದ ಚರಂಡಿಯೊಂದರಲ್ಲಿ ನವಜಾತ ಹೆಣ್ಣುಮಗು ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಸಮೀಪಕ್ಕೆ ತೆರಳಿ ಪರಿಶೀಲಿಸಿದಾಗ ಮಗುವಿನ ಕರುಳುಬಳ್ಳಿಯನ್ನು ಸರಿಯಾಗಿ ಕತ್ತರಿಸದಿರುವುದು ಕಂಡುಬಂದಿದ್ದು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವೇಳೆ ಡಾ. ರವೀಂದ್ರ ಅವರು ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ್ದು ಇದೀಗ ಮೈಸೂರಿನ ಚೆಲುವಾಂಬಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.