ಟ್ರಿನ್ ಟ್ರಿನ್ ಸೇವೆಗಾಗಿ 11 ಸಾವಿರ ಮಂದಿ ಸದಸ್ಯತ್ವ

ಟ್ರಿನ್ ಟ್ರಿನ್ ಸೇವೆಗಾಗಿ 11 ಸಾವಿರ ಮಂದಿ ಸದಸ್ಯತ್ವ

MY   ¦    Jan 11, 2019 02:10:28 PM (IST)
ಟ್ರಿನ್ ಟ್ರಿನ್ ಸೇವೆಗಾಗಿ 11 ಸಾವಿರ ಮಂದಿ ಸದಸ್ಯತ್ವ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೈಕಲ್ ಸಂಸ್ಕೃತಿ ವೈಭವ ಕಲೆಗಟ್ಟುತ್ತಿದ್ದು, ಒಂದೂವರೆ ವರ್ಷದ ಹಿಂದೆಯಷ್ಟೆ ಜಾರಿಗೊಂಡ ಸಾರ್ವಜನಿಕ ಸೈಕಲ್ ವಿನಿಯೋಗ ವ್ಯವಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಪ್ರಸ್ತುತ 11 ಸಾವಿರ ಮಂದಿ ಸದಸ್ಯತ್ವ ಪಡೆದು ಸೈಕಲ್ ಬಳಕೆ ಮಾಡುತ್ತಿದ್ದರೆ ಟ್ರಿನ್ ಟ್ರಿನ್ ಎಂದೇ ಖ್ಯಾತಿಯಾಗಿರುವ ಈ ವ್ಯವಸ್ಥೆಯಲ್ಲಿ ಶೇ 40ರಷ್ಟು ಶಾಲಾ-ಕಾಳೇಜುಗಳಿಗೆ ವಿದ್ಯಾರ್ಥಿಗಳು ಉಪಯೋಗ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಅದರಿಂದ ಉಂಟಾಗುವ ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ಹಾಗೂ ವಾಹನವಿಲ್ಲದ ಜನ ಪರದಾಡುವಂತಾಗಬಾರದೆಂದು ಈ ವ್ಯವಸ್ಥೆ ಜಾರಿಗೆ ತರಲಾಗಿದೆ

ಟ್ರಿನ್ ಟ್ರಿನ್ ಬಳಕೆ ಹೇಗೆ?
ಸದಸ್ಯತ್ವ ಪಡೆಯಲು ಒಟ್ಟು 6 ಕಚೇರಿಗಳನ್ನು ತೆರೆಯಲಾಗಿದ್ದು ಮೊದಲು 360 ಪಾವತಿ ಮಾಡಬೇಕು. ಇದರಲ್ಲಿ 250 ರುಪಾಯಿ ಮರುಪಾವತಿಯಾಗುವ ಭದ್ರತಾ ಠೇವಣಿ ಆಗಿದ್ದರೆ ಅದರಲ್ಲಿ 50 ರೂ ಸಂಸ್ಕರಣಾ ಶುಲ್ಕವಾಗಿರುತ್ತದೆ. 1 ತಿಂಗಳ ಸೇವಾವಿಧಿ ಇರುತ್ತದೆ. ಸದಸ್ಯತ್ವದ ಬಳಿಕ ಸ್ಮಾರ್ಟ್ ಕಾರ್ಡ್ ದೊರೆಯಲಿದೆ. ಇದಕ್ಕೆ ಅಂತರ್ಜಾಲ ಹಾಗೂ ಟ್ರಿನ್ ಟ್ರಿನ್ ಮೂಲಕವೂ ನೋಂದಾಣಿಗೆ ಅವಕಾಶವಿರುತ್ತದೆ.