ಶಿಡ್ಲಘಟ್ಟದಲ್ಲಿ ದಾಖಲೆಯಿಲ್ಲದ 13ಲಕ್ಷ ರೂ. ವಶ

ಶಿಡ್ಲಘಟ್ಟದಲ್ಲಿ ದಾಖಲೆಯಿಲ್ಲದ 13ಲಕ್ಷ ರೂ. ವಶ

LK   ¦    Apr 15, 2018 06:30:41 PM (IST)
ಶಿಡ್ಲಘಟ್ಟದಲ್ಲಿ ದಾಖಲೆಯಿಲ್ಲದ 13ಲಕ್ಷ ರೂ. ವಶ

ಶಿಡ್ಲಘಟ್ಟ: ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ವೈ.ಹುಣಸೇನಹಳ್ಳಿ ಬಳಿಯ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ದಾಖಲೆ ಇಲ್ಲದ 13 ಲಕ್ಷ 42 ಸಾವಿರದ 500 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದು, ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿಡ್ಲಘಟ್ಟ ತಾಲೂಕು ವೈ.ಹುಣಸೇನಹಳ್ಳಿಯ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ಹಣವನ್ನು ಸಾಗಿಸುತ್ತಿದ್ದಾಗ ಹಣ ಸಾಗಿಸುತ್ತಿದ್ದ ಕಾರು ಸಮೇತ ನಗದು ಹಣವನ್ನು ವಶಪಡಿಸಿಕೊಂಡು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಮಹಾರಾಷ್ಟ್ರದಿಂದ ಆಗಮಿಸಿದ ಚಿಂತಾಮಣಿ ಕಡೆ ಸಂಚರಿಸುತ್ತಿದ್ದ ಕಾರನ್ನು ತಪಾಸಣೆ ಮಾಡಿದ್ದು ಅದರಲ್ಲಿ 13,42,500 ರೂ ಪತ್ತೆ ಆಗಿದೆ. ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾದ ಕಾರಣ ಕಾರು ಹಾಗೂ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಹಾರಾಷ್ಟ್ರ ರಾಜ್ಯ ಕೊಲ್ಲಾಪುರ ಮೂಲಕ ಪ್ರಕಾಶ್ ಪಾಂಡುರಂಗ ಚೌವ್ಹಾಣ್ ಎನ್ನುವವರಿಗೆ ಸೇರಿದ ಹಣ ಇದು ಎಂದು ಕಾರಿನಲ್ಲಿದ್ದ ಚಾಲಕ ಹಾಗೂ ಇತರೆ ನಾಲ್ವರು ಹೇಳಿದ್ದಾರಾದರೂ ಹಣದ ಮೂಲ, ಎಲ್ಲಿಂದ ಎಲ್ಲಿಗೆ ಏಕೆ ಸಾಗಿಸುತ್ತಿದ್ದರು ಎನ್ನುವ ವಿಚಾರ ಸ್ಪಷ್ಟಪಡಿಸಿಲ್ಲ.

ಚೆಕ್ ಪೋಸ್ಟ್ ನಲ್ಲಿದ್ದ ಅಧಿಕಾರಿಗಳಾದ ಮುರಳಿ, ಎಂಸಿಸಿ ತಂಡದ ಮುನಿರಾಜು, ಪಿಡಿಒ ರಾಮಕೃಷ್ಣ, ಪೊಲೀಸ್ ಸಿಬ್ಬಂದಿ ಸವರ್ೇಶ್, ಶ್ರೀನಿವಾಸ್ ಇನ್ನಿತರರು ಚೆಕ್ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.