ಬಿದ್ದು ಸೊಂಟ ಮುರಿದುಕೊಂಡ ಗಾನಕೋಗಿಲೆ ಎಸ್.ಜಾನಕಿ

ಬಿದ್ದು ಸೊಂಟ ಮುರಿದುಕೊಂಡ ಗಾನಕೋಗಿಲೆ ಎಸ್.ಜಾನಕಿ

HSA   ¦    May 04, 2019 02:37:21 PM (IST)
ಬಿದ್ದು ಸೊಂಟ ಮುರಿದುಕೊಂಡ ಗಾನಕೋಗಿಲೆ ಎಸ್.ಜಾನಕಿ

ಮೈಸೂರು: ಬಿದ್ದು ಸೊಂಟಕ್ಕೆ ಗಾಯ ಮಾಡಿಕೊಂಡಿರುವ ಗಾನ ಕೋಗಿಲೆ ಎಸ್. ಜಾನಕಿ ಅವರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಬಂಧಿಕರ ಮನೆಯಲ್ಲಿ ಜಾನಕಿ ಅವರು ಬಿದ್ದು ಸೊಂಟಕ್ಕೆ ಏಟಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

81ರ ಹರೆಯದ ಜಾನಕಿ ಅವರು ಈಗಾಗಲೇ 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.