ಅಧಿಕಾರಿಗಳ ದಾಳಿಗೆ ನಾವು ಹೆದರಲ್ಲ: ಸಿಎಂ ಸಿದ್ದರಾಮಯ್ಯ ಗುಡುಗು

ಅಧಿಕಾರಿಗಳ ದಾಳಿಗೆ ನಾವು ಹೆದರಲ್ಲ: ಸಿಎಂ ಸಿದ್ದರಾಮಯ್ಯ ಗುಡುಗು

NB   ¦    Aug 11, 2017 04:11:27 PM (IST)
ಅಧಿಕಾರಿಗಳ ದಾಳಿಗೆ ನಾವು ಹೆದರಲ್ಲ: ಸಿಎಂ ಸಿದ್ದರಾಮಯ್ಯ ಗುಡುಗು

ಮೈಸೂರು: ಕಾಂಗ್ರೆಸ್ ನಾಯಕರನ್ನೇ ಹುಡುಕಿ ಬಿಜೆಪಿ ಐಟಿ ದಾಳಿ ಮಾಡಿಸುತ್ತಿದೆ. ಆದರೆ ನಾವು ಐಟಿ ದಾಳಿಗೆ ಹೆದರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ ಶಿವಕುಮಾರ್ ಅವರು ಐಟಿ ರಿಟರ್ಸ್ಸ ಸಲ್ಲಿಸಿದ್ದಾರೆಯೇ ಎಂಬುದನ್ನ ಪರಿಶೀಲನೆ ಮಾಡುತ್ತಿದ್ದಾರೆ ಅಷ್ಟೆ. ಆದರೆ ಪರಿಶೀಲನೆಯನ್ನೇ ದೊಡ್ಡ ವಿಚಾರವನ್ನಾಗಿ ಬಿಂಬಿಸಲಾಗುತ್ತಿದೆ. ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಿಸುತ್ತಿದ್ದಾರೆ. ಇದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತ್ಯೇಕ ಧರ್ಮ ಸ್ಥಾಪನೆಗೆ ನಮಗೆ ಅಧಿಕಾರ ಇಲ್ಲ? ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈ ಅಧಿಕಾರ ನಮಗೆ ಇಲ್ಲ. ಈ ಬಗ್ಗೆ ಎರಡು ಅಭಿಪ್ರಾಯಗಳಿವೆ ಎಂದು ಹೇಳಿದ್ದೆ ಅಷ್ಟೆ. ಆದರೆ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು. ಕೆರೆಗಳನ್ನ ಡಿನೋಟಿಫೈ ಮಾಡಲು ಸರ್ಕಾರ ಮುಂದಾಗಿಲ್ಲ
ಕೆರೆಗಳನ್ನ ಡಿನೋಟಿಫೈ ಮಾಡಲು ಸರ್ಕಾರ ಮುಂದಾಗಿಲ್ಲ. ಉಪಯೋಗಕ್ಕೆ ಬಾರದ ಕೆರೆಗಳನ್ನ ತೆಗೆದು ಹಾಕುವ ಬಗ್ಗೆ ಚರ್ಚೆ ನಡೆದಿದೆ.ಕಂದಾಯ ಇಲಾಖೆಯ ದಾಖಲೆಯಿಂದ ತೆಗೆದು ಹಾಕಲು ಚರ್ಚೆ ನಡೆದಿದೆ. ಕೆರೆಗಳಿದ್ದ ಜಾಗದಲ್ಲಿ ಸ್ಲಂ ರಸ ಬಸ್ ನಿಲ್ದಾಣಗಳಿವೆ.ಅವುಗಳನ್ನ ಡಿನೋಟಿಫೈ ಮಾಡಲು ಹೇಳಿದ್ದೇನೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು. ಈ ಮಧ್ಯೆ ಗುಜರಾತ್ ರಾಜಕಾರಣ ಕರ್ನಾಟಕದ ರಾಜಕಾರಣದ ಮೇಲೆ ಪರಿಣಾಮ ಬೀರಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು