ಭೂಗತ ಪಾತಕಿ ಬನ್ನಂಜೆ ರಾಜನಿಗೆ ಮೈಸೂರಿನಲ್ಲಿ ಆರೋಗ್ಯ ತಪಾಸಣೆ

ಭೂಗತ ಪಾತಕಿ ಬನ್ನಂಜೆ ರಾಜನಿಗೆ ಮೈಸೂರಿನಲ್ಲಿ ಆರೋಗ್ಯ ತಪಾಸಣೆ

YK   ¦    May 05, 2019 10:50:48 AM (IST)
ಭೂಗತ ಪಾತಕಿ ಬನ್ನಂಜೆ ರಾಜನಿಗೆ ಮೈಸೂರಿನಲ್ಲಿ ಆರೋಗ್ಯ ತಪಾಸಣೆ

ಮೈಸೂರು: ಮಂಗಳೂರು ಜೈಲಿನಲ್ಲಿದ್ದ ಭೂಗತ ಪಾತಕಿ ಬನ್ನಂಜೆ ರಾಜನ ಆರೋಗ್ಯ ತಪಾಸಣೆಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಶನಿವಾರ ನಡೆಸಲಾಯಿತು.

ಪೊಲೀಸ್ ಬಿಗಿ ಭದ್ರತೆಯೊಂದಿಗೆ ಮೈಸೂರು ಆಸ್ಪತ್ರೆಗೆ ಕರೆತಂದ ಬನ್ನಂಜೆ ರಾಜನಿಗೆ ವಿವಿಧ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ನಂತರ ಮತ್ತೇ ಮಂಗಳೂರಿಗೆ ಕರೆದೊಯ್ಯಲಾಯಿತು. ಪೊಲೀಸರು ಯಾಕೆ ಬನ್ನಂಜೆ ರಾಜನನ್ನು ಮಂಗಳೂರಿನಿಂದ ಮೈಸೂರಿಗೆ ಕರೆತಂದು ಚಿಕಿತ್ಸೆ ನೀಡಿದರು ಎಂದು ತಿಳಿದುಬಂದಿಲ್ಲ.

44 ಪ್ರಕರಣಗಳಲ್ಲಿ ಬೇಕಾಗಿದ್ದ ಭೂಗತ ಪಾತಕಿಯನ್ನು 2015ರಲ್ಲಿ ಮೊರೊಕ್ಕೋದಲ್ಲಿ ಗಡಿಪಾರು ಮಾಡಲಾಯಿತು.

ಅಲ್ಲಿಂದ್ದ ಮಂಗಳೂರಿನ ಜೈಲಿನಲ್ಲಿ ಇರಿಸಲಾಗಿದೆ.