ಲಾಂಗೇಸ್ಟ್ ಚೈನ್ ಲಿಂಕ್ ಯೋಗದಲ್ಲಿ ವಿಶ್ವದಾಖಲೆಗಾಗಿ ಅರಮನೆಯಲ್ಲಿ ಪೂರ್ವತಯಾರಿ

ಲಾಂಗೇಸ್ಟ್ ಚೈನ್ ಲಿಂಕ್ ಯೋಗದಲ್ಲಿ ವಿಶ್ವದಾಖಲೆಗಾಗಿ ಅರಮನೆಯಲ್ಲಿ ಪೂರ್ವತಯಾರಿ

Jun 17, 2017 03:43:36 PM (IST)

ಮೈಸೂರು: 3ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಲಾಂಗೇಸ್ಟ್ ಚೈನ್ ಲಿಂಕ್ ಯೋಗಾದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಲು ಇಂದು ಅರಮನೆ ಆವರಣದಲ್ಲಿ ಪೂರ್ವತಯಾರಿ ನಡೆಸಲಾಯಿತು.

ಇಂದು ಬೆಳಗ್ಗೆ 10.30ಕ್ಕೆ ಅರಮನೆ ಆವರಣದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಯೋಗ ಪಟ್ಟುಗಳಿಂದ ಲಾಂಗೇಸ್ಟ್ ಚೈನ್ ಲಿಂಕ್ ಯೋಗಾದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಲು ಪೂರ್ವ ತಯಾರಿ ನಡೆಸಲಾಯಿತು.

ಜೂನ್ 19 ರಂದು ಅರಮನೆ ಆವರಣದಲ್ಲಿ ನಡೆಯುವ ಲಾಂಗೇಸ್ಟ್ ಚೈನ್ ಲಿಂಕ್ ಯೋಗದಲ್ಲಿ ಗಿನ್ನಿಸ್ ದಾಖಲೆ ಮಾಡವ ಸಲುವಾಗಿ ರಿಂಗ್ ಮಾದರಿಯಲ್ಲಿ ಗುರುತು ಪಡಿಸಿದ ಜಾಗದಲ್ಲಿ ನಿಂತುಕೊಂಡು ವಿದ್ಯಾರ್ಥಿಗಳು ಯೋಗಸನದ ಪ್ರಕಾರಗಳಾದ ವೀರ ಭದ್ರಸನ ಪ್ರಕಾರ 1 ಹಾಗೂ 2, ತ್ರಿಕೋನಸನ ಹಾಗೂ ಪ್ರಸರಿತಪಡೋತ್ತಸನವನ್ನ ಎರಡು ನಿಮಿಷಗಳಲ್ಲಿ ಒಟ್ಟಿಗೆ ಮಾಡುವ ಮೂಲಕ ಗಿನ್ನಿಸ್ ದಾಖಲೆಗೆ ಪೂರ್ವ ತಯಾರಿ ನಡೆಸಲು ಯಶಸ್ವಿಯಾದರು.

ಹಿಂದಿನ ದಾಖಲೆ:
2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ ಆವರಣದಲ್ಲಿ 3884 ವಿದ್ಯಾರ್ಥಿಗಳು ಲಾಂಗೇಸ್ಟ್ ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು, ಈ ದಾಖಲೆಯನ್ನ ಅಳಿಸಲು ಮೈಸೂರಿನ ವಿದ್ಯಾರ್ಥಿಗಳು ಸಜ್ಜಾಗಿದ್ದು 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಾಂಗೇಸ್ಟ್ ಚೈನ್ ಲಿಂಕ್ ಯೋಗ ಮಾಡುವ ಮೂಲಕ ನೂತನ ದಾಖಲೆಗೆ ಸಿದ್ದತೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್, ಜೂನ್ 19 ರಂದು ಅರಮನೆ ಆವಣರದಲ್ಲಿ ಚೈನ್ ಲಿಂಕ್ ಯೋಗದಲ್ಲಿ ಗಿನ್ನಿಸ್ ದಾಖಲೆ ಮಾಡುವ ಉದ್ದೇಶದಿಂದ ಇಂದು ಪೂರ್ವಭಾವಿ ತಯಾರಿ ನಡೆಸಿದ್ದೇವೆ. 6001 ವಿದ್ಯಾರ್ಥಿಗಳಿಂದ ಯೋಗ ಮಾಡಿಸುವ ಉದ್ದೇಶ ಹೊಂದಿದ್ದೇವೆ. ಆದರೆ ನಮ್ಮ ನಿರೀಕ್ಷೆಗೂ ಮೀರಿ ಸುಮಾರು 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದಾರೆ, ಚೈನ್ ಲಿಂಕ್ ಯೋಗದಲ್ಲಿ ವಿಶ್ವದಾಖಲೆ ಮಾಡುವ ವಿಶ್ವಾಸವಿದೆ ಎಂದರು.