ಮೈಸೂರು ಅರಣ್ಯ ಇಲಾಖೆಯಿಂದ 50ಸಾವಿರ ಸಸಿ ನೆಡುವ ಮಹತ್ವದ ಕಾರ್ಯ

ಮೈಸೂರು ಅರಣ್ಯ ಇಲಾಖೆಯಿಂದ 50ಸಾವಿರ ಸಸಿ ನೆಡುವ ಮಹತ್ವದ ಕಾರ್ಯ

YK   ¦    May 06, 2019 04:37:23 PM (IST)
ಮೈಸೂರು ಅರಣ್ಯ ಇಲಾಖೆಯಿಂದ 50ಸಾವಿರ ಸಸಿ ನೆಡುವ ಮಹತ್ವದ ಕಾರ್ಯ

ಮೈಸೂರು: ಗಾರ್ಡನ್ ಸಿಟಿ ಎಂದೇ ಖ್ಯಾತವಾದ ಮೈಸೂರು ನಗರನ್ನು ಮತ್ತೇ ಹಸಿರ ನಗರವನ್ನಾಗಿ ಮಾಡಲು ಅರಣ್ಯ ಇಲಾಖೆ 50 ಸಾವಿರ ಸಸಿಗಳನ್ನು ನೆಡಲು ಚಿಂತನೆ ನಡೆಸಿದೆ.

ಈ ಸಂಬಂಧ ಮಾತನಾಡಿದ ಅರಣ್ಯ ಉಪ ಸಂರಕ್ಷಣಾಧಿಕಾರಿ ಕೆ ಸಿ ಪ್ರಶಾಂತ್, ಕಳೆದ ವರ್ಷ ನೆಟ್ಟ ಸಸಿಗಳು ಚಿಗುರು ಬಂದು ಚೆನ್ನಾಗಿ ಬೆಳೆಯುತ್ತಿದೆ. ಸುಮಾರು 85-90 ಶೇ ಸಸಿಗಳನ್ನು ಕಳೆದ ವರ್ಷ ನೆಡಲಾಗಿತ್ತು. 4ರಿಂದ 8 ಅಡಿ ಎತ್ತರ ಗಿಡಗಳು ಬೆಳೆದಿದೆ. ಸಾರ್ವಜನಿಕರ ಭಾಗವಹಿಸುಕೊಳ್ಳುವಿಕೆ ಕೂಡ ತುಂಬಾ ಚೆನ್ನಾಗಿದೆ ಎಂದರು.

ನಗರದಲ್ಲಿ ಎರಡು ಬಾರಿ ಮಳೆಯಾದ ಬಳಿಕ ಸಸಿ ನೆಡುವ ಕೆಲಸ ಕಾರ್ಯ ರೂಪಕ್ಕೆ ಬರಲಿದೆ. ಅರಣ್ಯ ಇಲಾಖೆ ಮತ್ತೇ ಹೆಚ್ಚಿನ ಒತ್ತನ್ನು ನೀಡಿ ಸಸಿ ನೆಡುವ ಕಾರ್ಯಕ್ಕೆ ಕೈ ಹಾಕಿದೆ. ಅರಣ್ಯ ಇಲಾಖೆ 15 ವಿವಿಧ ತಳಿಯ ಸಸಿಗಳನ್ನು ವಿಜಯನಗರ, ಮೂಡಾ ಲೇಜೌಟ್, ವಿವಿಧ ಸರ್ಕಾರಿ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಆವರಣದಲ್ಲಿ ನೆಡುವ ಕಾರ್ಯಕ್ರಮ ನಡೆಯಲಿದೆ.