ನಾಡ ಹಬ್ಬ ದಸರಾ ಮಹೋತ್ಸವಕ್ಕೆ 16 ಉಪಸಮಿತಿಗಳ ಪಟ್ಟಿ ಸಿದ್ದ

ನಾಡ ಹಬ್ಬ ದಸರಾ ಮಹೋತ್ಸವಕ್ಕೆ 16 ಉಪಸಮಿತಿಗಳ ಪಟ್ಟಿ ಸಿದ್ದ

Aug 12, 2017 10:19:56 AM (IST)
ನಾಡ ಹಬ್ಬ ದಸರಾ ಮಹೋತ್ಸವಕ್ಕೆ 16 ಉಪಸಮಿತಿಗಳ ಪಟ್ಟಿ ಸಿದ್ದ

ಮೈಸೂರು: ನಾಡ ಹಬ್ಬ ದಸರಾ-2017 ಮಹೋತ್ಸವವನ್ನ ಸುಸೂತ್ರವಾಗಿ ನಡೆಸಲು 16 ಉಪಸಮಿತಿಗಳನ್ನು ರಚಿಸಿ ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶ ಹೊರಡಿಸಿದ್ದಾರೆ.ಈ ಬಾರಿ ನಾಡ ಹಬ್ಬ ದಸರಾ ಮಹೋತ್ಸವವನ್ನ ಸಂಪ್ರದಾಯಕವಾಗಿ ನಡೆಸಲು ಸಿಎಂ ಸಿದ್ದರಾಮಯ್ಯ ಈಗಾಗಲೇ ನಿರ್ಧರಿಸಿದ್ದು, ದಸರಾ ಮಹೋತ್ಸವ ಅಂಗವಾಗಿ 16 ಉಪಸಮಿತಿಗಳನ್ನು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಜಿಲ್ಲಾಧಿಕಾರಿ ರಚಿಸಿ ಆದೇಶ ಹೊರಡಿಸಿದ್ದಾರೆ.16 ಉಪಸಮಿತಿಗಳು ಇಂತಿದೆ: ಸ್ವಾಗತ ಮತ್ತು ಆಮಂತ್ರಣ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ಕಾರ್ಯಧ್ಯಕ್ಷರಾಗಿ ಪಾಲಿಕಯ ಹೆಚ್ಚುವರಿ ಆಯುಕ್ತ ಎನ್, ರಾಜು, ಕಾರ್ಯದರ್ಶಿಯಾಗಿ ಪಾಲಿಕೆ ಸಹಾಯಕ ಆಯುಕ್ತ ಪುಟ್ಟಶೇಷಗಿರಿ ಅವರನ್ನ ನೇಮಕ ಮಾಡಲಾಗಿದೆ.
ಮೆರವಣಿಗೆ, ಪಂಜಿನ ಕವಾಯಿತು ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರರಾವ್, ಕಾರ್ಯಧ್ಯಕ್ಷರಾಗಿ ಡಿಸಿಪಿ ಡಾ. ವಿಕ್ರಮ ಅಮಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ಧೇಶಕ ಚೆನ್ನಪ್ಪ(ಮೆರವಣೆಗೆ), ಮುಡಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮೀಶ(ಪಂಜಿನ ಕವಾಯಿತು) ಅವರನ್ನ ನೇಮಕ ಮಾಡಲಾಗಿದೆ.

ಸ್ತಬ್ಧ ಚಿತ್ರ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಜಿ.ಪಂ ಸಿಇಒ ಶಿವಶಂಕರ್, ಕಾರ್ಯಧ್ಯಕ್ಷರಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ಧೇಶಕ ಎಚ್.ರಾಮಕೃಷ್ಣೇಗೌಡ, ಕಾರ್ಯದರ್ಶಿಯಾಗಿ ಜಿ.ಪಂ ಮುಖ್ಯ ಯೋಜನಾಧಿಕಾರಿ ಕೆ.ವಿ ಪ್ರಭುಸ್ವಾಮಿ ಅವರನ್ನ ನೇಮಕ ಮಾಡಲಾಗಿದೆ.ರೈತ ದಸರಾ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಜಿ.ಪಂ ಉಪಕಾರ್ಯದರ್ಶಿ ಕೆ.ಶಿವರಾಮೇಗೌಡ, ಕಾರ್ಯಧ್ಯಕ್ಷರಾಗಿ ಜಂಟಿ ಕೃಷಿ ನಿರ್ಧೇಶಕ ಕೆ.ಎಂ ಸೋಮಸುಂದರ, ಕಾರ್ಯದರ್ಶಿಯಾಗಿ ಪಶು ಸಂಗೋಪನಾ ಇಲಾಖೆ ಉಪನಿರ್ಧೇಶಕ ಪಿ.ಎಂ ಪ್ರಸಾದ್ ಮೂರ್ತಿ ಅವರನ್ನ ನೇಮಕ ಮಾಡಲಾಗಿದೆ. ಕ್ರೀಡೆ ಉಪಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರರಾವ್, ಕಾರ್ಯಧ್ಯಕ್ಷರಾಗಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ಧೇಶಕ ಕೆ.ಎಲ್ ಸುಭಾಷ್ ಚಂದ್ರ, ಕಾರ್ಯದರ್ಶಿಯಾಗಿ ಡಿಸಿಪಿ ಬಿ.ವಿ ಕಿತ್ತೂರ ಅವರನ್ನ ನೇಮಕ ಮಾಡಲಾಗಿದೆ. ಸಾಂಸ್ಕೃತಿ ದಸರಾ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಜಿ.ಪಂ. ಸಿಇಒ ಶಿವಶಂಕರ್, ಕಾರ್ಯಧ್ಯಕ್ಷರಾಗಿ ರಂಗಾಯಣ ಜಂಟಿ ನಿರ್ಧೇಶಕ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿಯಾಗಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ಧೇಶಕ ಚನ್ನಪ್ಪ ಅವರನ್ನ ನೇಮಕ ಮಾಡಲಾಗಿದೆ.

ಲಲಿತಕಲೆ ಮತ್ತು ಕರಕುಶಲ ಸಮಿತಿಗೆ, ಉಪ ವಿಶೇಷಾಧಿಕಾರಿಯಾಗಿ ಮುಡಾ ಆಯುಕ್ತ ಡಾ.ಎಂ ಮಹೇಶ, ಕಾರ್ಯಧ್ಯಕ್ಷರಾಗಿ ಕಾವಾ ಡೀನ್, ಕಾರ್ಯದರ್ಶಿಯಾಗಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅವರನ್ನ ನೇಮಕ ಮಾಡಲಾಗಿದೆ. ದೀಪಲಾಂಕ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಮುಡಾ ಆಯುಕ್ತ ಡಾ.ಎಂ ಮಹೇಶ, ಕಾರ್ಯಧ್ಯಕ್ಷರಾಗಿ ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಎನ್, ನರಸಿಂಹೇಗೌಡ, ಕಾರ್ಯದರ್ಶಿಯಾಗಿ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಎಂ.ಕೆ ಸೋಮಶೇಖರ್ ಅವರನ್ನ ನೇಮಕ ಮಾಡಲಾಗಿದೆ.ಕವಿಗೋಷ್ಟಿ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಡಿಡಿಪಿಐ ಡಾ.ಬಿ.ಕೆಎಸ್. ವರ್ಧನ್, ಕಾರ್ಯಧ್ಯಕ್ಷರಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಪಕಿ ಎನ್.ಕೆ ಲೋಲಾಕ್ಷಿ, ಕಾರ್ಯದರ್ಶಿಯಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ಧೇಶಕ ಮಂಜುನಾಥ್ ಅವರನ್ನ ನೇಮಕ ಮಾಡಲಾಗಿದೆ.ಯೋಗದಸರಾ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಪಾಲಿಕೆ ಆಯುಕ್ತ ಜಿ.ಜಗದೀಶ್, ಕಾರ್ಯಧ್ಯಕ್ಷರಾಗಿ ಭೂ ದಾಖಲೆಗಳ ಉಪ ನಿರ್ಧೇಶಕಿ ರಮ್ಯಾ, ಕಾರ್ಯದರ್ಶಿಯಾಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್ ಸೀತಾಲಕ್ಷ್ಮೀ ಅವರನ್ನ ನೇಮಕ ಮಾಡಲಾಗಿದೆ.

ಯುವ ಸಂಭ್ರಮ, ಯುವ ದಸರಾಗೆ ಉಪ ವಿಶೇಷಾಧಿಕಾರಿಯಾಗಿ ಎಸ್.ಪಿ ರವಿ ಡಿ.ಚೆನ್ನಣ್ಣವರ್, ಕಾರ್ಯಧ್ಯಕ್ಷರಾಗಿ ಪಾಲಿಕೆ ಆಯುಕ್ತ ಜಿ.ಜಗದೀಶ್, ಕಾರ್ಯದರ್ಶಿಯಾಗಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೋಮಶೇಖರ್ ಅವರನ್ನ ನೇಮಕ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ದಸರಾಗೆ, ಉಪ ವಿಶೇಷಾಧಿಕಾರಿಯಾಗಿ ಜಿ.ಪಂ ಉಪ ಕಾರ್ಯದರ್ಶಿ ಕೆ.ಎಂ ಶಿವಕುಮಾರಸ್ವಾಮಿ, ಕಾರ್ಯಧ್ಯಕ್ಷರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ಧೇಶಕಿ ಕೆ.ರಾಧಾ, ಕಾರ್ಯದರ್ಶಿಯಾಗಿ ಶಿಕ್ಷಣಾಧಿಕಾರಿ ಎಂ.ಆರ್ ಶಿವರಾಮು ಅವರನ್ನ ನೇಮಕ ಮಾಡಲಾಗಿದೆ.ಆಹಾರ ಮೇಳ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಜಿ.ಪಂ ಸಿಇಒ ಶಿವಶಂಕರ್, ಕಾರ್ಯಧ್ಯಕ್ಷರಾಗಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು, ಕಾರ್ಯದರ್ಶಿಯಾಗಿ ಗೃಹ ಮಂಡಳಿ ಸಹಾಯಕ ಎಂಜಿನಿಯರ್ ಕೃಷ್ಣಪ್ಪ ಅವರನ್ನ ನೇಮಕ ಮಾಡಲಾಗಿದೆ. ಕುಸ್ತಿ ಉಪಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಎಸ್.ಪಿ ರವಿ ಚೆನ್ನಣ್ಣವರ, ಕಾರ್ಯಧ್ಯಕ್ಷರಾಗಿ ಎಎಸ್ ಪಿ ಮೊಹಮ್ಮದ್ ಸುಜಿತ, ಕಾರ್ಯದರ್ಶಿಯಾಗಿ ಕಾವೇರಿ ನೀರಾವರಿ ನಿಗಮ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಕುಮಾರ್ ಅವರನ್ನ ನೇಮಕ ಮಾಡಲಾಗಿದೆ.