ಚಾನೆಲ್ ಟಿಆರ್ ಪಿ ಗೆ ನಾವೇ ಬೇಕಾ: ಮಾಧ್ಯಮಗಳ ಮೇಲೆ ಸಿಎಂ ಫುಲ್ ಗರಂ

ಚಾನೆಲ್ ಟಿಆರ್ ಪಿ ಗೆ ನಾವೇ ಬೇಕಾ: ಮಾಧ್ಯಮಗಳ ಮೇಲೆ ಸಿಎಂ ಫುಲ್ ಗರಂ

YK   ¦    May 19, 2019 03:28:58 PM (IST)
ಚಾನೆಲ್ ಟಿಆರ್ ಪಿ ಗೆ ನಾವೇ ಬೇಕಾ: ಮಾಧ್ಯಮಗಳ ಮೇಲೆ ಸಿಎಂ ಫುಲ್ ಗರಂ

ಮೈಸೂರು: ರಾಜಕಾರಣಿಗಳು ಏನು ಹಾಸ್ಯಗಾರಾರ. ನಿಮ್ಮ ಚಾನೆಲ್ ನಡೆಸುವುದಕ್ಕೆ ನಮ್ಮ ಹೆಸರೇ ಬೇಕಾ ಎಂದು ಸಿಎಂ ಕುಮಾರಸ್ವಾಮಿ ಅವರು ಎಂದಿನಂತೆ ಮಾಧ್ಯಮದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದ ಭಾಷಣದ ವೇಳೇ ಮಾಧ್ಯಮದ ವಿರುದ್ಧ ಹರಿಹಾಯ್ದ ಸಿಎಂ, ಕಳೆದ ಒಂದು ತಿಂಗಳಿನಿಂದ ಮಾಧ್ಯಮದಿಂದ ದೂರ ಉಳಿದಿದ್ದೇನೆ. ಟಿವಿ ಮಾಧ್ಯಮಗಳು ನಡೆಸಿಕೊಡುವ ಕಾರ್ಯಕ್ರಮದಲ್ಲಿ ನಮ್ಮನ್ನು ಹಾಸ್ಯಾಗಾರರಂತೆ ಬಿಂಬಿಸಲಾಗುತ್ತಿದೆ. ‘ನಿಖಿಲ್ ಎಲ್ಲಿದೀಯಪ್ಪ’ ಎಂದು ಹಾಸ್ಯದ ರೀತಿಯ ಕಾರ್ಯಕ್ರಮವನ್ನು ನಡೆಸುತ್ತೀರಿ. ಚಾನೆಲ್ ನ್ನು ನಡೆಸುವುದಕ್ಕೆ ಸಾಧ್ಯವಾಗದೆ ಇದ್ದರೆ ಮುಚ್ಚಿಬಿಡಿ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರ ಅಷ್ಟೋ ಬೇಕಾ ಮುರಿದು ಬೀಳುವುದಿಲ್ಲ.ಸೋಲನ್ನು ಈಗಾಗಲೇ ಕಂಡಿರುವ ನಮಗೆ ಸೋಲಿನ ಭಯವಿಲ್ಲ. ಮುಂದಿನ ದಿನಗಳಲ್ಲಿ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರದ ಬಗ್ಗೆ ಚರ್ಚಿಸಲಾಗುವುದು ಎಂದರು.