ತೆರೆದ ಬಾವಿಗೆ ಬಿದ್ದು ಮಗು ಸಾವು

ತೆರೆದ ಬಾವಿಗೆ ಬಿದ್ದು ಮಗು ಸಾವು

LK   ¦    Jul 11, 2018 12:19:26 PM (IST)
ತೆರೆದ ಬಾವಿಗೆ ಬಿದ್ದು ಮಗು ಸಾವು

ಮೈಸೂರು: ಆಟವಾಡುತ್ತಾ ಹೋದ ಮಗುವೊಂದು ಹೊಲದಲ್ಲಿದ್ದ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಸುರೇಶ್ ಎಂಬುವರ ಪುತ್ರ ಪವನ್(4) ಮೃತಪಟ್ಟ ಮಗು. ಸುರೇಶ್ ಅವರು ತಮ್ಮ ಹೊಲದಲ್ಲಿ ಮೂಲಂಗಿ ಬೆಳೆಯಲು ಸುಮಾರು 30 ಅಡಿ ಆಳದ ಬಾವಿ ನಿರ್ಮಿಸಿದ್ದರು. ಇದಕ್ಕೆ ಯಾವುದೇ ರೀತಿಯ ತಡೆಗೋಡೆಯನ್ನು ನಿರ್ಮಿಸಿರಲಿಲ್ಲ. ಕೆಲಸಕ್ಕೆಂದು ಹೋಗುವಾಗ ಜೊತೆಯಲ್ಲಿ ಮಗ ಪವನ್‍ನನ್ನು ಕರೆದುಕೊಂಡು ಹೋಗಿದ್ದರಲ್ಲದೆ ಅವನನ್ನು ನೋಡಿಕೊಂಡು ತಮ್ಮ ಕೆಲಸವನ್ನು ಮಾಡುತ್ತಿದ್ದರು ಎನ್ನಲಾಗಿದೆ.

ಆ ನಂತರ ಮನೆಗೆ ಬರುವ ವೇಳೆಗೆ ಮಗ ಬಾರದೆ ಅಲ್ಲಿಯೇ ಇರುವುದಾಗಿ ಹೇಳಿದ್ದಾನೆ. ಹೀಗಾಗಿ ಮಗನನ್ನು ಪಕ್ಕದ ಜಮೀನಿನಲ್ಲಿದ್ದ ಸಂಬಂಧಿಕರ ಬಳಿ ಬಿಟ್ಟು ಸುರೇಶ್ ಮನೆಗೆ ಬಂದಿದ್ದಾರೆ.

ಜಮೀನಿನಲ್ಲಿ ಆಟವಾಡುತ್ತಿದ್ದ ಮಗು ಪವನ್ ಸಂಬಂಧಿಕರ ಕಣ್ತಪ್ಪಿಸಿ ಬಾವಿ ಬಳಿಗೆ ಹೋಗಿದೆ. ಅಲ್ಲದೆ ಬಾವಿಯಲ್ಲಿದ್ದ ನೀರನ್ನು ನೋಡುವ ಸಲುವಾಗಿ ಇಣುಕಿ ಆಯತಪ್ಪಿ ನೀರಿಗೆ ಬಿದಿದ್ದು, ಇದು ಯಾರ ಗಮನಕ್ಕೂ ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಸ್ವಲ್ಪ ಸಮಯದ ಬಳಿಕ ಮಗು ಕಾಣದಿದ್ದಾಗ ಕೂಗುತ್ತಾ ಹುಡುಕಾಟ ನಡೆಸಿದಾಗ ಬಾವಿಯೊಳಗೆ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಮೇಲೆತ್ತಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗು ಆದಾಗಲೇ ಸಾವನ್ನಪ್ಪಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More Images