ಮೈಸೂರಿನಲ್ಲಿ ಕೊರೊನಾ ಸೋಂಕಿಲ್ಲವೆಂದು ಸ್ಪಷ್ಟಪಡಿಸಿದ ಡಿಸಿ

ಮೈಸೂರಿನಲ್ಲಿ ಕೊರೊನಾ ಸೋಂಕಿಲ್ಲವೆಂದು ಸ್ಪಷ್ಟಪಡಿಸಿದ ಡಿಸಿ

LK   ¦    Mar 19, 2020 07:32:37 PM (IST)
ಮೈಸೂರಿನಲ್ಲಿ ಕೊರೊನಾ ಸೋಂಕಿಲ್ಲವೆಂದು ಸ್ಪಷ್ಟಪಡಿಸಿದ ಡಿಸಿ

ಮೈಸೂರು: ಈಗಾಗಲೇ ಎಲ್ಲೆಡೆ ಜನರನ್ನು ಬೆಚ್ಚಿ ಬೀಳಿಸಿರುವ ಕೊರೋನಾ ವೈರಸ್ ಮೈಸೂರು ಮಂದಿಯನ್ನು ಕೂಡ ಭಯಕ್ಕೀಡು ಮಾಡಿದೆ. ಆದರೆ ಜನ ಆತಂಕ ಪಡಬೇಕಾದ ಅಗತ್ಯವಿಲ್ಲ. ಜಿಲ್ಲೆಯಲ್ಲಿ  ಕೊರೋನಾ ಸೋಂಕು ಇಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಗುರುವಾರ ಮಧ್ಯಾಹ್ನ 12 ಗಂಟೆ ವರೆಗೆ 164 ಜನರ ಮೇಲೆ ನಿಗಾ ವಹಿಸಲಾಗಿದ್ದು, ಈ ಪೈಕಿ 101 ಜನರನ್ನು ಗೃಹ ದಿಗ್ಬಂಧÀನದಲ್ಲಿ ಇರಿಸಲಾಗಿದೆ.  ಅಲ್ಲದೆ ಇಲ್ಲಿವರೆಗೆ 63 ಮಂದಿಯನ್ನು 14 ದಿನಗಳ ಹೋಮ್ ಐಸೋಲೇಶನ್ ನಿಂದ ಮುಕ್ತಾಯಗೊಳಿಸಲಾಗಿದೆ. ಜತೆಗೆ ಕೊರೊನಾ ಸೋಂಕು ಇಲ್ಲ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಗೃಹ ದಿಗ್ಬಂಧನದಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಒಟ್ಟು 24 ಜನರ ಸ್ಯಾಂಪಲ್‍ನ್ನು ಪರೀಕ್ಷೆಗೆ ಒಳಪಡಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಯಾವುದೇ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ ಎಂದಿದ್ದಾರೆ.

ಇನ್ನೊಂದೆಡೆ ಕೊರೋನಾ ವೈರಸ್ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಜಿಲ್ಲೆಯಾದ್ಯಂತ ಸಾರ್ವಜನಿಕ ಗ್ರಂಥಾಲಯಗಳ ಸೇವೆಯನ್ನು ಮಾರ್ಚ್ ಅಂತ್ಯದವರೆಗೆ ಸ್ಥಗಿತಗೊಳಿಸಲಾಗಿದೆ. ಆದರೆ ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲ್ಲ ಸಾರ್ವಜನಿಕ ಗ್ರಂಥಾಲಯಗಳು ಎಂದಿನಂತೆ ನಿಗಧಿತ ವೇಳೆಯಲ್ಲಿ ಸಿಬ್ಬಂದಿ  ಕೆಲಸಗಳನ್ನು ನಿರ್ವಹಿಸಲಿದ್ದು,. ಸಾರ್ವಜನಿಕರು ಪುಸ್ತಕಗಳನ್ನು ಎರವಲು ನೀಡಲು ಹಾಗೂ ಹಿಂಪಡೆಯಲು ಎರವಲು ವಿಭಾಗವನ್ನು ತೆರೆಯಲಾಗಿದೆ.