ಮೊಮ್ಮಗ ಚೆನ್ನಾಗಿದ್ದಾನೆ, ನಾಮಕರಣ ನಿಗದಿಯಾಗಿಲ್ಲ: ಪ್ರಮೋದಾದೇವಿ ಸ್ಪಷ್ಟನೆ

ಮೊಮ್ಮಗ ಚೆನ್ನಾಗಿದ್ದಾನೆ, ನಾಮಕರಣ ನಿಗದಿಯಾಗಿಲ್ಲ: ಪ್ರಮೋದಾದೇವಿ ಸ್ಪಷ್ಟನೆ

MY   ¦    Feb 13, 2018 04:51:32 PM (IST)
ಮೊಮ್ಮಗ ಚೆನ್ನಾಗಿದ್ದಾನೆ, ನಾಮಕರಣ ನಿಗದಿಯಾಗಿಲ್ಲ: ಪ್ರಮೋದಾದೇವಿ ಸ್ಪಷ್ಟನೆ

ಮೈಸೂರು: ನನ್ನ ಮೊಮ್ಮಗ ಚೆನ್ನಾಗಿದ್ದಾನೆ, ಅವನ ನಾಮಕರಣ ಹಿಂದಿನ ಪದ್ಧತಿಯಂತೆ ನಡೆಯುತ್ತದೆ. ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಂತರ ನಾಡಿನ ಜನತೆಗೆ ಮಹಾಶಿವರಾತ್ರಿಯ ಶುಭಾಶಯಗಳು ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ನಾಡಿನ ಜನತೆಗೆ ಶುಭಾಶಯ ತಿಳಿಸಿದರು.

ಇಂದು ಅರಮನೆ ಆವರಣದಲ್ಲಿ ತ್ರಿನೇಶ್ವರ ಸ್ವಾನಿಯ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಾಮಾತೆ ಪ್ರಮೋದಾದೇವಿ ಒಡೆಯರ್, ‘ನನ್ನ ಮೊಮ್ಮಗನ ನಾಮಕರಣ ಮನೆಯಲ್ಲಿ ಯಾವ ಪದ್ಧತಿಯಲ್ಲಿರುತ್ತದೆಯೋ ಅದೇ ರೀತಿ ನಡೆಯುತ್ತದೆ. ನಾಮಕರಣ ದಿನಾಂಕ ಮತ್ತು ಕಾರ್ಯಕ್ರಮಗಳ ಯಾವಾಗ ಆಗಬೇಕೋ ಅಂದೇ ನಡೆಯುತ್ತದೆ ಎಲ್ಲಾವನ್ನು ಈಗಾಲೇ ಹೇಳಲು ಅಸಾಧ್ಯ ಎಂದರು.

ಮೈಸೂರಿನ ಜನತೆಗೆ ಹಾಗೂ ನಾಡಿನ ಜನತೆಗೆ ಶಿವ ಕೃಪಾಕಟಾಕ್ಷ ಸದಾ ಕಾಲ ಇರಲಿ. ಜೊತೆಗೆ ತ್ರಿಪುರ ಸುಂದರಿ ಮತ್ತು ಚಾಮುಂಡೇಶ್ವರಿ ಮೈಸೂರಿನ ಜನತೆಯನ್ನ ಸದಾ ಕಾಲ ಕಾಪಾಡಲಿ ಎಂದು ಕೇಳಿಕೊಂಡಿದ್ದೇನೆ. ಎಲ್ಲಾ ಜನತೆಗೆ ಮಹಾಶಿವರಾತ್ರಿ ಶುಭಾಶಯಗಳು ಎಂದರು.