ಮೈಸೂರು: ಗಜ ಪಡೆಯ ಆಗಮಕ್ಕೆ ಕೆಲವೇ ಕ್ಷಣಗಳಲ್ಲಿ ಚಾಲನೆ

ಮೈಸೂರು: ಗಜ ಪಡೆಯ ಆಗಮಕ್ಕೆ ಕೆಲವೇ ಕ್ಷಣಗಳಲ್ಲಿ ಚಾಲನೆ

LK   ¦    Aug 12, 2017 03:18:57 PM (IST)
ಮೈಸೂರು: ಗಜ ಪಡೆಯ ಆಗಮಕ್ಕೆ ಕೆಲವೇ ಕ್ಷಣಗಳಲ್ಲಿ ಚಾಲನೆ

ಮೈಸೂರು: ಗಜ ಪಡೆಯ ಆಗಮನಕ್ಕೆ ವೀರನ ಹೊಸಳ್ಳಿ ನಾಗಪುರ ಹಾಡಿಯಲ್ಲಿ ಕೆಲವೇ ಕ್ಷಣಗಳಲ್ಲಿ ವಿದ್ಯುಕ್ತ ಚಾಲನೆ ದೊರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಗಜಪಡೆಯ ಆಗಮನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇದೀಗ ಪೂಜಾ ಕೈಂಕರ್ಯ ನೇರವೇರಿತು. ಜಿಲ್ಲಾಧಿಕಾರಿ ರಂಧೀಪ್ ಸೇರಿದಂತೆ ಮತ್ತಿತರೇ ಅಧಿಕಾರಿಗಳಿಂದ ಪೂಜೆ. ದಸರಾ ಮಹೋತ್ಸವದ ಗಜಪಯಣ. ಅರ್ಜುನ ನೇತೃತ್ವದ ಆನೆಗಳಿಗೆ ವಿವಿಧ ಹೂಗಳಿದ ಅಲಂಕಾರ. ಅರ್ಜುನ, ಬಲರಾಮ, ಅಭಿಮನ್ಯು, ವರಲಕ್ಷ್ಮಿ, ಕಾವೇರಿ, ವಿಜಯ ಆನೆಗಳಿಗೆ ವಸ್ತ್ರಾಲಂಕಾರ. ಗಜಪೂಜೆಯಲ್ಲಿ ಪಾಲ್ಗೊಳ್ಳಲಿರುವ ಆರು ಆನೆಗಳು.
ತಲಾ ಮೂರು ಗಂಡು, ಹೆಣ್ಣು ಆನೆಗಳಿಗೆ ನಾಗಪುರ ಹಾಡಿಯಲ್ಲಿ ಪೂಜೆ.

ಚಾಮರಾಜನಗರ ಜಿಲ್ಲೆಯ ಕೆ.ಗುಡಿ ಆನೆ ಶಿಬಿರದಿಂದ ನೇರವಾಗಿ ಮೈಸೂರಿಗೆ ಆಗಮಿಸಲಿರುವ ಗಜೇಂದ್ರ. ಕೊಡಗು ಜಿಲ್ಲೆಯ ಮತ್ತಿಗೂಡು ಆನೆಶಿಬಿರದಿಂದ ಮೈಸೂರಿಗೆ ಬರಲಿದ್ದಾನೆ ಭೀಮ. ಭೀಮ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಕಿರಿಯ ಸದಸ್ಯ. ಕೇವಲ ೧೭ ವರ್ಷದ ಗಂಡಾನೆ ಭೀಮ. ದಸರಾ ಮಹೋತ್ಸವದ ಗಜ ಪಯಣಕ್ಕೆ 11.23 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪರವರಿಂದ ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತ ಚಾಲನೆ. ಗಜ ಪಡೆಗೆ ಪುಪ್ಪಾರ್ಚನೆ ಮಾಡಿ ಶುಭ ಹಾರೈಸಿದರು. ಈ ಬಾರಿ ದಸರಾ ಮಹೋತ್ಸವಕ್ಕೆ 15 ಆನೆಗಳು ಭಾಗವಹಿಸಲಿವೆ. ಇಂದು ವಿಶ್ವ ಆನೆಗಳ ದಿನಾಚರಣೆ ಅಂದೆ ಈ ದಸರಾ ಮಹೋತ್ಸವಕ್ಕೆ ಗಣಪಯಣ ಕಾರ್ಯಕ್ರಮ ನೆಡೆದಿರುವುದು ಒಂದು ಕಾಕಾತಾಳಿಯ.

ನೆಲ್ಲೂರು ರಸ್ತೆಯ ಡಾಂಬರೀಕರಣ ಆಗಲೀಕರಣಕ್ಕೆ ಸಚಿವರಿಂದ ಚಾಲನೆ. ವೇದಿಕೆಯ ಗಜಪಯಣ ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ನೃತ್ಯ. ಹಾಡಿ ಮಕ್ಕಳಿಂದ ಅಚ್ಚೆವೂ ಕನ್ನಡದ ದೀಪ ಹಾಡಿಗೆ ನೃತ್ಯ. ಸಚಿವರಿಂದ ಮೈಸೂರು ದಸರಾ ಮಹೋತ್ಸವ 2017 ದಸರಾ ಮಹೋತ್ಸವದ ವೆಬ್ ಸೈಟ್ ಅನಾವರಣಗೊಳಿಸಿದರು.
ಇದೇ ಸಂದರ್ಭ ಆನೆಗಳ ಪರಿಚಯ. ಗಜ ಎಂಬ ಕಿರುಚಿತ್ರದ ಸಿಡಿ ಯನ್ನು ಬಿಡುಗಡೆಗೊಳಿಸಿದರು. ಗಜ ಕಿರುಚಿತ್ರ ಪ್ರದರ್ಶನವನ್ನು ಎಲ್ ಇ ಡಿ ಪರದೆಯ ಮೂಲಕ ಪ್ರದರ್ಶಿಸಲಾಯಿತು. ಸಚಿವರಿಂದ ಮಾಹುತರು ಹಾಗೂ ಕಾವಾಡಿಗಳಿಂದ ತಂಬೂಲವನ್ನು ನೀಡಿ ಗೌರವ ಸಮರ್ಪಣೆ. ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿ ದಸರಾ ವೆಬ್ ಸೈಟ್ ಬಿಡುಗಡೆ. ಪ್ರವಾಸಿಗರಿಗೆ ಅನುಕೂಲವಾಗಲು ಪ್ರವಾಸಿ ತಾಣಗಳ ಮಾಹಿತಿ ಈ ವೆಬ್ ಸೈಟ್ ನಲ್ಲಿ ಲಭ್ಯ. ಗಜಪಯಣ ಅದ್ದೂರಿ ಕಾರ್ಯಕ್ರಮಕ್ಕೆ ಗಣ್ಯರು ಭಾಗಿ, ಈ ಕಾರ್ಯಕ್ರಮಕ್ಕೆ ಜನರೂ ಕೂಡ ಸಾಕ್ಷೀಯಾದರು.