ಗೌರಿ ಹತ್ಯೆ ತನಿಖೆಗೆ ಕಾಲಮಿತಿ ವಿಧಿಸುವುದು ಅಸಾಧ್ಯ: ರಾಮಲಿಂಗಾ ರೆಡ್ಡಿ

ಗೌರಿ ಹತ್ಯೆ ತನಿಖೆಗೆ ಕಾಲಮಿತಿ ವಿಧಿಸುವುದು ಅಸಾಧ್ಯ: ರಾಮಲಿಂಗಾ ರೆಡ್ಡಿ

MH   ¦    Oct 12, 2017 05:24:34 PM (IST)
ಗೌರಿ ಹತ್ಯೆ ತನಿಖೆಗೆ ಕಾಲಮಿತಿ ವಿಧಿಸುವುದು ಅಸಾಧ್ಯ: ರಾಮಲಿಂಗಾ ರೆಡ್ಡಿ

ಮೈಸೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ಕಾಲಮಿತಿ ವಿಧಿಸುವುದು ಅಸಾಧ್ಯ. ಎಸ್.ಐ.ಟಿ ತನಿಖೆ ನಡೆಸುತ್ತಿದೆ. ಸುಳಿವು ದೊರೆತಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ದಕ್ಷಿಣ ವಲಯದ ಪೊಲೀಸ್ ಅಧಿಕಾರಿಗಳ ಕಾರ್ಯ ಪರಿಶೀಲನಾ ಸಭೆ ನಡೆಸಿ ಎಸ್.ಪಿ‌. ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಸುಳಿವು ದೊರೆತಿದ್ದು, ಎಸ್ ಐಟಿ ತನಿಖೆ ಪ್ರಗತಿಯಲ್ಲಿದೆ. ಇಂತಹ ಪ್ರಕರಣದ ತನಿಖೆಗೆ ಕಾಲಮಿತಿ ವಿಧಿಸುವುದು ಅಸಾಧ್ಯ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಉತ್ತಮವಾಗಿದೆ. ಶಾಲಾ‌ ಕಾಲೇಜುಗಳ ಬಳಿ ಬೀದಿ‌ಕಾಮಣ್ಣರು, ಪುಂಡ ಪೋಕರಿಗಳ ಹಾವಳಿ ತಡೆಗೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಮೀಟರ್ ಬಡ್ಡಿ‌ ದಂಧೆಗೆ ಕಡಿವಾಣ ಹಾಕಬೇಕು. ರಾತ್ರಿ ವೇಳೆ ಪೊಲೀಸರ ಗಸ್ತು ಪರಿಣಾಮಕಾರಿಯಾಗಿ ಇರಬೇಕು. ಬಾರ್, ವೈನ್ ಸ್ಟೋರ್ಸ್ ಗಳ ಸಮಯ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ಪ್ರತೀ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಭೆ ನಡೆಸಬೇಕು, ಜನರಿಗೆ ಹತ್ತಿರವಾಗಬೇಕು.
ಸಾರ್ವಜನಿಕರು ನೀಡಿದ ದೂರು ದಾಖಲಿಸಿ ಎಫ್.ಐ.ಆರ್. ದಾಖಲಿಸಲು ತಡ ಮಾಡದಂತೆ ಸೂಚನೆ ನೀಡಿದ್ದೇನೆ ಎಂದರು.

ಸಭೆಗೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಗೈರು
ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಬಿಟ್ಟು ಪೊಲೀಸರ ಪರಿಶೀಲನಾ‌‌ ಸಭೆ ನಡೆಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಗೃಹ ಸಚಿವಾಲಯದಲ್ಲಿ ಕೆಂಪಯ್ಯನವರ ಹಸ್ತಕ್ಷೇಪ ಎಂಬುದಿಲ್ಲ. ನಾನು ಬಂದ ಮೇಲೆ ಆ ರೀತಿ ಯಾವುದೂ ಆಗಿಲ್ಲ. ಅಗತ್ಯ ಬಿದ್ದಾಗ ನಾನು ಎಲ್ಲರಿಂದಲೂ ಸಲಹೆ ಪಡೆಯುತ್ತೇನೆ. ಮಾಧ್ಯಮಗಳೂ ಕೂಡ ಸಂಪಾದಕೀಯ ಹಾಗೂ ಒಂದು ಗಂಟೆಗಳ ಚರ್ಚೆ ಮೂಲಕ ನಮಗೆ ಸಲಹೆ ಕೊಡುತ್ತೀರಿ. ನಾವು ಆ ಸಲಹೆಗಳನ್ನೂ ಗಮನಿಸುತ್ತೇನೆ. ಗೃಹ ಇಲಾಖೆಗೆ ಕೆಂಪಯ್ಯ ಹಸ್ತಕ್ಷೇಪದ ಬಗ್ಗೆ ಕೇಳಿದ ಪ್ರಶ್ನೆಗೆ ರಾಮಲಿಂಗಾರೆಡ್ಡಿ ಜಾಣ ಉತ್ತರ ನೀಡಿದರು.

More Images