ಯುವತಿಯ ಸಾಮೂಹಿಕ ಅತ್ಯಾಚಾರ: ತನಿಖೆಗೆ ತಂಡಗಳ ರಚನೆ

ಯುವತಿಯ ಸಾಮೂಹಿಕ ಅತ್ಯಾಚಾರ: ತನಿಖೆಗೆ ತಂಡಗಳ ರಚನೆ

HSA   ¦    May 11, 2019 03:18:54 PM (IST)
ಯುವತಿಯ ಸಾಮೂಹಿಕ ಅತ್ಯಾಚಾರ: ತನಿಖೆಗೆ ತಂಡಗಳ ರಚನೆ

ಮೈಸೂರು: ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಂಕಿತರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ವೇಳೆ ಕತ್ತಲಾಗಿತ್ತು ಮತ್ತು ಆ ಪ್ರದೇಶದಲ್ಲಿ ಯಾವುದೇ ಸಿಸಿಟಿವಿಗಳು ಇಲ್ಲದೆ ಇರುವ ಕಾರಣದಿಂದಾಗಿ ದುಷ್ಕರ್ಮಿಗಳ ಪತ್ತೆ ಸ್ವಲ್ಪ ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿದರು.

ಪೊಲೀಸರು ಮೊಬೈಲ್ ಟವರ್ ಸಿಗ್ನಲ್ ಮಾಹಿತಿ ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದರು.

ಮೇ 7ರಂದು ಲಿಂಗಾಂಬುದಿ ಪಾಳ್ಯದ ಬಳಿ ಪ್ರೇಮಿಗಳು ಏಕಾಂತದಲ್ಲಿ ಇದ್ದ ವೇಳೆ ಯುವಕರ ಗುಂಪೊಂದು ಅಲ್ಲಿಗೆ ಆಗಮಿಸಿ, ಯುವಕನನ್ನು ಕಟ್ಟಿ ಹಾಕಿ ಯುವತಿಯ ಅತ್ಯಾಚಾರವೆಸಗಿತ್ತು.