ಕೋಟಿ ರೂಪಾಯಿ ಸಬ್ ವೇಗೆ ಬೀಗ: ಶಾಲಾ ಮಕ್ಕಳಿಗೆ ಅಪಾಯ!

ಕೋಟಿ ರೂಪಾಯಿ ಸಬ್ ವೇಗೆ ಬೀಗ: ಶಾಲಾ ಮಕ್ಕಳಿಗೆ ಅಪಾಯ!

MH   ¦    Nov 14, 2017 07:14:20 PM (IST)
ಕೋಟಿ ರೂಪಾಯಿ ಸಬ್ ವೇಗೆ ಬೀಗ: ಶಾಲಾ ಮಕ್ಕಳಿಗೆ ಅಪಾಯ!

ಮೈಸೂರು: ಒಂದು ಕೋಟಿ ಖರ್ಚು ಮಾಡಿ ನಿರ್ಮಾಣವಾಗಿದ್ದ ಸಬ್ ವೇ ಮಕ್ಕಳ ದಿನಾಚರಣೆ ದಿನವೂ ಬಳಕೆಯಾಗದೆ ಅಪಾಯದಲ್ಲಿ ಮಕ್ಕಳು ರಸ್ತೆ ದಾಟುತ್ತಿರುವ ದೃಶ್ಯ ಅರಮನೆ ಮುಂಭಾಗದಲ್ಲಿ ಕಂಡು ಬಂದಿದ್ದು, ಇಲ್ಲಿ ಯಾವುದೇ ಸಂಚಾರಿ ಪೊಲೀಸರು ಮಕ್ಕಳ ಸಹಾಯಕ್ಕೆ ಬಂದಿಲ್ಲ.

ಇಂದು ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಅರಮನೆ, ವಸ್ತ ಪ್ರದರ್ಶನದ ವೀಕ್ಷಣೆಗೆ ಹಾಗೂ ಮೃಗಾಲಯಕ್ಕೆ ಪ್ರವೇಶ ಉಚಿತವಿರುವುದರಿಂದ ಶಾಲಾ ಮಕ್ಕಳು ಇಂದು ಅರಮನೆ ನೋಡಲು ಆಗಮಿಸಿದ್ದಾರೆ. ಅರಮನೆ ವೀಕ್ಷಣೆಯ ನಂತರ ವಸ್ತು ಪ್ರದರ್ಶನ ವೀಕ್ಷಣೆಗೆ ಹೋಗುತ್ತಾರೆ. ಆದರೆ ಸಂಚಾರಿ ದಟ್ಟಣೆಯಿಂದ ಅರಮನೆ ಮತ್ತು ವಸ್ತು ಪ್ರದರ್ಶನದ ನಡುವೆ ಒಂದು ಕೋಟಿ ವೆಚ್ಚದಲ್ಲಿ ಸಬ್  ವೇ ನಿರ್ಮಾಣ ಮಾಡಲಾಗಿದೆ.

ಆದರೆ ಈ ಸಬ್ ವೇ ಕಳೆದ ಕೆಲವು ತಿಂಗಳಿನಿಂದ ಬೀಗ ಜಡಿದಿದ್ದು ಇದರಿಂದ ಜನರು ಸೇರಿದಂತೆ ಎಲ್ಲರೂ ಅಪಾಯದಲ್ಲಿ ರಸ್ತೆ ದಾಟಬೇಕಾಗಿದೆ. ಇಂದು ಮಕ್ಕಳ ದಿನಾಚರಣೆವಾದರಿಂದ ತುಂಬಾ ಮಕ್ಕಳು ಬಂದಿದ್ದು ಅಪಾಯದಲ್ಲಿ ಅರಮನೆಯ ಮುಂಭಾಗದ ರಸ್ತೆಯನ್ನು ಸಂಚಾರಿ ದಟ್ಟಣೆಯ ನಡುವೆ ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂತು. ಆದರೆ ಈ ಸ್ಥಳದಲ್ಲಿ ಯಾವುದೇ ಸಂಚಾರಿ ಪೊಲೀಸರು ಇಲ್ಲದೆ ಇರುವುದು ಕಂಡು ಬಂದಿದ್ದು, ಈಗಲಾದರೂ ಮಹಾನಗರ ಪಾಲಿಕೆ ಇತ್ತ ಕಡೆ ಗಮನ ಹರಿಸಬೇಕಾಗಿದೆ.