ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಗೌರಿಗಣೇಶ ಹಬ್ಬ

ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಗೌರಿಗಣೇಶ ಹಬ್ಬ

MY   ¦    Sep 12, 2018 04:35:17 PM (IST)
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಗೌರಿಗಣೇಶ ಹಬ್ಬ

ಮೈಸೂರು: ಇಲ್ಲಿನ ಪರಿವರ್ತನ0 ಟ್ರಸ್ಟ್ ಹಾಗೂ ಆದಿತ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಿಂದೂ- ಮುಸ್ಲಿಂ ಯುವಕರು ಒಂದಾಗಿ ಗಣೇಶನ ಹಬ್ಬವನ್ನ ಆಚರಿಸಿರುವುದು ವಿಶೇಷವಾಗಿದೆ.

ಅಗ್ರಹಾರದ ವೃತ್ತದಲ್ಲಿರುವ ಟ್ರಸ್ಟ್ ನ ಕಚೇರಿಯಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಪರಸ್ಪರ ಗಣೇಶ ಹಾಗೂ ಮೊಹರ0 ಹಬ್ಬದ ಶುಭಾಶಯಗಳನ್ನ ವಿನಿಮಯ ಮಾಡಿಕೊಂಡು ಹಿಂದೂ ಮುಸ್ಲಿಂ ಭಾಯಿ...ಭಾಯಿ..ಎಂಬ ಸಂದೇಶ ರವಾನಿಸಿದರು.

ಆನಂತರ ಪರಮಪೂಜ್ಯ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ, ಭಾರತ ದೇಶದಲ್ಲಿ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುವುದು ಹಿಂದೂ ಮತ್ತು ಮುಸಲ್ಮಾನ್ ಧರ್ಮ ಸಂಪ್ರದಾಯವಾಗಿದೆ. ಮೇಲಾಗಿ ಈ ಬಾರಿ ಗೌರಿ ಗಣೇಶ ಮತ್ತು ಮೊಹರಂ ಹಬ್ಬ ಒಟ್ಟಾಗಿ ಬಂದಿದ್ದರಿಂದ ಉಭಯ ಸಮಾಜದ ಬಾಂಧವರು ಈ ಹಬ್ಬಗಳನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆಯಿಂದ ಬಾಳ ಬೇಕಾಗಿದೆ.

ಈ ನಾಡಿನ ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದ್ದು, ಆದ್ದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ಥರ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಪರಿವರ್ತನಂ ಟ್ರಸ್ಟ್ ನ ಅಧ್ಯಕ್ಷರಾದ ವಿನಯ್ ಕಣಗಾಲ್, ಹಿರಿಯ ಕಲಾವಿದರಾದ ಮೈಕ್ ಚಂದ್ರು, ಆದಿತ್ರಿ ಚಾರಿಟಬಲ್ ಟsಸ್ಟ್‍ನ ಅಧ್ಯಕ್ಷರಾದ ಸೌಭಾಗ್ಯ, ಕಾರ್ಯದರ್ಶಿ ಅಮ್ರಿನ್ ತಾಜ್, ಅರವಿಂದ್, ದಿಲೀಪ್, ರಂಜಿತ್ ಪ್ರಸಾದ್, ಮುಸಲ್ಮಾನ್ ಯುವಕರಾದ ಕುಸುರು, ಅಬ್ರಾರ್, ನಾಸೀರ್ ಬಾಷಾ, ಜಮೀರ್ ಪಾಷಾ, ಅನ್ಸರ್ ಪಾಷಾ ಮೊದಲಾದವರಿದ್ದರು.