ಭೂಮಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸೋಣ: ಚಾಲೆಂಜಿಂಗ್ ಸ್ಟಾರ್ ದರ್ಶನ ಕರೆ

ಭೂಮಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸೋಣ: ಚಾಲೆಂಜಿಂಗ್ ಸ್ಟಾರ್ ದರ್ಶನ ಕರೆ

MY   ¦    Jul 11, 2018 09:33:16 AM (IST)
ಭೂಮಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸೋಣ: ಚಾಲೆಂಜಿಂಗ್ ಸ್ಟಾರ್ ದರ್ಶನ ಕರೆ

ಮೈಸೂರು: ಕರ್ನಾಟಕದ ಅರಣ್ಯ ಇಲಾಖೆ ರಾಯಭಾರಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಡಿನಲ್ಲಿ ಪ್ಲಾಸ್ಟಿಕ್ ಉಪಯೋಗಿಸದಂತೆ ಮನವಿ ಮಾಡಿ ಈ ಭೂಮಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ದರ್ಶನ್ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಭೇಟಿ ನೀಡಿ, ಸಫಾರಿ ಮಾಡಿ ಸ್ವತಃ ಕ್ಯಾಮಾರಾದಲ್ಲಿ ಪ್ರಾಣಿಗಳ ಚಿತ್ರಗಳನ್ನು ಸೆರೆಹಿಡಿದ್ದರು. ಸಫಾರಿ ಬಳಿಕ ಆನೆ ಶಿಬಿರಕ್ಕೆ ಭೇಟಿ ನೀಡಿ ಆನೆ ಮತ್ತು ಮಾವುತರ ಆರೋಗ್ಯ ವಿಚಾರಿಸಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದರು.

ದರ್ಶನ್ ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಡಿನೊಳಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಬಟ್ಟೆ ಬ್ಯಾಗ್ ಹಿಡಿದು ಫೋಟೋ ತೆಗೆಸಿಕೊಂಡಿದ್ದರು.

`ನೀವು 250 ಗ್ರಾಂ ಸ್ಮಾರ್ಟ್ ಫೋನ್ ಕ್ಯಾರಿ ಮಾಡ್ತೀರಾ ಜೊತೆಗೆ 350 ಗ್ರಾಂ ತೂಕದ ಪವರ್ ಬ್ಯಾಂಕ್ ನ್ನು ಕ್ಯಾರಿ ಮಾಡ್ತೀರಾ. ಆದರೆ 30 ಗ್ರಾಂ ತೂಕದ ಬಟ್ಟೆಯನ್ನು ಯಾಕೆ ಕ್ಯಾರಿ ಮಾಡುವುದಿಲ್ಲ. ಬನ್ನಿ ಈ ಭೂಮಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸೋಣ ಎಂದು ಫೋಟೋ ಕೆಳಗೆ ಬರೆದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಉಪಯೋಗಿಸದಂತೆ ಮನವಿ ಮಾಡಿದ್ದಾರೆ.