ಬೈಕ್ ಗೆ ಸ್ಕಾರ್ಪಿಯೋ ಡಿಕ್ಕಿ: ಮೂವರ ದುರ್ಮರಣ

ಬೈಕ್ ಗೆ ಸ್ಕಾರ್ಪಿಯೋ ಡಿಕ್ಕಿ: ಮೂವರ ದುರ್ಮರಣ

LK   ¦    May 06, 2019 06:06:29 PM (IST)
ಬೈಕ್ ಗೆ ಸ್ಕಾರ್ಪಿಯೋ ಡಿಕ್ಕಿ: ಮೂವರ ದುರ್ಮರಣ

ಮೈಸೂರು: ಬೈಕಿನಲ್ಲಿ ಅಡುಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಸ್ಕಾರ್ಪಿಯೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಮೂವರು ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೀರನಲ್ಲಿ ಗೇಟ್ ಬಳಿ ನಡೆದಿದೆ.

ಘಟನೆಯಲ್ಲಿ ಮೃತಪಟ್ಟವರು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಇಬ್ಜಾಲ ಗ್ರಾಮದವರಾದ ಬೈರನಾಯ್ಕ ಎಂಬುವರ ಪುತ್ರ ಪ್ರಕಾಶ್ (28) ಸೋಮಶೇಖರ ಎಂಬುವವರ ಪುತ್ರ ಸೋಮೇಶ್(27) ಮತ್ತು ಮಹದೇವನಾಯ್ಕ ಎಂಬುವವರ ಪುತ್ರ ಮಹದೇವಸ್ವಾಮಿ ಅಲಿಯಾಸ್ ಮಾದೇಶ(30) ಎಂದು ಗುರುತಿಸಲಾಗಿದೆ.

ಈ ಮೂವರು ಮದುವೆ ಹಾಗೂ ಇನ್ನಿತರ ಶುಭಾ ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅದರಂತೆ ಪಿರಿಯಾಪಟ್ಟಣದಲ್ಲಿ ಅಡುಗೆ ಕೆಲಸ ನಿರ್ವಹಿಸುವ ಅಡುಗೆ ಕಂಟ್ರಾಕ್ಟರ್ ಒಬ್ಬರ ಮುಖಾಂತರ  ಅಡುಗೆ ಕೆಲಸಕ್ಕಾಗಿ ಇಬ್ಜಾಲ ಗ್ರಾಮದಿಂದ  ಟಿವಿಎಸ್ ಅಪಾಚಿ ಬೈಕಿನಲ್ಲಿ(ಕೆ.ಎ.09.ಹೆಚ್.ಆರ್.6070) ಹುಣಸೂರು ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದಾಗ ಪಿರಿಯಾಪಟ್ಟಣ ತಾಲೂಕಿನ ಕೀರನಲ್ಲಿ ಗೇಟ್ ಬಳಿ ಕುಶಾಲನಗರದಿಂದ ಮೈಸೂರಿಗೆ ತೆರಳುತ್ತಿದ್ದ ಸ್ಕಾರ್ಪಿಯೋ(ಕೆ.ಎ.03.ಎಂ.ಪಿ.2723) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‍ನಲ್ಲಿದ್ದ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿ ಮೃತರ ಪೋಷಕರಿಗೆ ತಿಳಿಸಿ ಶವಗಳನ್ನು ಪಟ್ಟಣದ ಶವಗಾರಕ್ಕೆ ತಂದು ಮರಣೊತ್ತರ ಪರೀಕ್ಷೆ ನಡೆಸಿ ಸಂಬಂದಿಕರಿಗೆ ಒಪ್ಪಿಸಿದ್ದಾರೆ. ಅಪಘಾತದಲ್ಲಿ ಜಖಂಗೊಂಡ ಎರಡು ವಾಹನಗಳನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಮೃತ ಪ್ರಕಾಶ್ ತಂದೆ ಬೈರನಾಯ್ಕ ಎಂಬುವವರು ಸ್ಕಾರ್ಪಿಯೋ ಚಾಲಕನ ನಿರ್ಲಕ್ಷ್ಯತನದಿಂದ ಈ ಅಪಘಾತ ಸಂಭವಿಸಿದೆ ಎಂದು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.