ರಂಗೋಲಿ ಸಾಂಸ್ಕೃತಿಕ ಪರಂಪರೆಯ ಬಹುದೊಡ್ಡ ಕಲೆ: ಸಚಿವೆ ಜಯಮಾಲ

ರಂಗೋಲಿ ಸಾಂಸ್ಕೃತಿಕ ಪರಂಪರೆಯ ಬಹುದೊಡ್ಡ ಕಲೆ: ಸಚಿವೆ ಜಯಮಾಲ

MY   ¦    Oct 11, 2018 04:50:45 PM (IST)
ರಂಗೋಲಿ ಸಾಂಸ್ಕೃತಿಕ ಪರಂಪರೆಯ ಬಹುದೊಡ್ಡ ಕಲೆ: ಸಚಿವೆ ಜಯಮಾಲ

ಮೈಸೂರು: ರಂಗೋಲಿ ನಮ್ಮ‌ ಸಾಂಸ್ಕೃತಿಕ ಪರಂಪರೆಯ ಬಹುದೊಡ್ಡ ಕಲೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಡಾ. ಜಯಮಾಲ ತಿಳಿಸಿದರು.

ಅರಮನೆ ಮುಂಭಾಗ ಇಂದು ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಏರ್ಪಡಿಸಲಾದ ರಂಗೋಲಿ ಸ್ಪರ್ಧೆಯನ್ನು ರಂಗೋಲಿ ಬರೆಯುವ ಮೂಲಕ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಂಗೋಲಿ ಮಧ್ಯದಲ್ಲಿ ದೇವರು ಬಂದು ಕೂರುತ್ತಾರೆ ಎಂಬ ನಂಬಿಕೆ ಇದೆ.

ರಂಗೋಲಿಗೆ ಕೆಟ್ಟ ಶಕ್ತಿಗಳನ್ನು ದೂರ ಮಾಡುವ ಶಕ್ತಿ ಇದೆ.ಆದ್ದರಿಂದ ಮನೆ ಮುಂದೆ ರಂಗೋಲಿ ಬಿಡಿಸುವ ಸಂಪ್ರದಾಯ ‌ನಡೆದುಕೊಂಡು ಬಂದಿದೆ.ಈ‌ಬಾರಿ ದಸರಾದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿರುವುದು ಖುಷಿ‌ ನೀಡಿದೆ.ನಾನು ಕೂಡಾ ಮನೆಯಲ್ಲಿ ರಂಗೋಲಿ ಬಿಡಿಸುತ್ತೇನೆ.

ರಥಸಪ್ತಮಿ, ದೀಪಾವಳಿ ಸಂದರ್ಭದಲ್ಲಿ ರಂಗೋಲಿ ಬಿಡಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಯುವತಿಯರು ಮಹಿಳೆಯರು ವಿವಿಧ ವಿನ್ಯಾಸದ, ವರ್ಣರಂಜಿತ ರಂಗೋಲಿಯನ್ನಯ ಬಿಡಿಸಿದರು.