ದೇವೇಗೌಡರ ಹುಟ್ಟುಹಬ್ಬಕ್ಕೆ ಗಿಡನೆಟ್ಟ ಅಭಿಮಾನಿಗಳು

ದೇವೇಗೌಡರ ಹುಟ್ಟುಹಬ್ಬಕ್ಕೆ ಗಿಡನೆಟ್ಟ ಅಭಿಮಾನಿಗಳು

LK   ¦    May 18, 2019 04:26:35 PM (IST)
ದೇವೇಗೌಡರ ಹುಟ್ಟುಹಬ್ಬಕ್ಕೆ ಗಿಡನೆಟ್ಟ ಅಭಿಮಾನಿಗಳು

ಮೈಸೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ 87ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಕೃಷ್ಣರಾಜ ಕ್ಷೇತ್ರದ ಯುವಘಟಕದ ವತಿಯಿಂದ ಹಸಿರು ಲೋಕ ಸಸಿ ನೆಡುವ ಅಭಿಯಾನಕ್ಕೆ ವಿವೇಕಾನಂದನಗರದ ಉದ್ಯಾನವನದಲ್ಲಿ ಚಾಲನೆ ನೀಡಲಾಯಿತು.

ಜೆಡಿಎಸ್ ಯುವ ಮುಖಂಡ ಅಜಯ್ ಶಾಸ್ತ್ರಿ ಮಾತನಾಡಿ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಭಾರತದ 11ನೇ ಪ್ರಧಾನಿಯಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಕನ್ನಡದ ಕಂಪನ್ನು ಬೀರಿದ ಕೆಚ್ಚೆದೆಯ ಕನ್ನಡ ಸಂಸದರು ಅವರೇ ಹೆಚ್.ಡಿ ದೇವೇಗೌಡರು ಎನ್ನುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ, ಕರ್ನಾಟಕದ ನೆಲ ಜಲ ಭಾಷೆ ವಿಚಾರವಾಗಿ ವಿವಾದವಾದಗ ತೊಂದರೆ ಬಂದಾಗ ಹೆಚ್.ಡಿ ದೇವೆಗೌಡರು ನೇತೃತ್ವ ವಹಿಸಿ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ, ರೈತಾಪಿ ಕುಟುಂಬದಿಂದ ಬಂದು ಮಣ್ಣಿನ ಮಗನಾಗಿ ಕೃಷಿ ಪ್ರಧಾನ ಯೋಜನೆಗಳು ಸೇರಿದಂತೆ ದೇಶದ ಆರ್ಥಿಕ ಪರಿಸ್ಥಿತಿ ನಿರ್ವಹಣೆ, ವಿದೇಶದಿಂದ ಬಂಡವಾಳ ಹೂಡಿಕೆ ತರುವಿಕೆ, ನದಿ ವನ್ಯ ಸಂರಕ್ಷಣೆ, ಪ್ರವಾಸೋದ್ಯಮ, ಹೆದ್ದಾರಿ ರಸ್ತೆ ಅಭಿವೃದ್ಧಿ, ಕಾರ್ಖಾನೆ ಉದ್ಯಮ ಸ್ಥಾಪನೆ, ಶಿಕ್ಷಣ ಸಂಸ್ಥೆಗೆ ಪ್ರಾರಂಭ, ದೇವಸ್ಥಾನಗಳ ಜೀರ್ಣೋದ್ಧಾರ, ಸಹಸ್ರಾರು ನಾಯಕರನ್ನು ರಾಜಕೀಯ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಬೆಳೆಸಿದ್ದಾರೆ.

ದೇವೆಗೌಡರು ಸಂದೇಶ ನೀಡಿರುವಂತೆ ದೇಶದಲ್ಲಿ ಅತಿ ಹೆಚ್ಚು ಗಿಡಮರಗಳಿದ್ದರೇ ಮಾತ್ರ ಆರೋಗ್ಯಕರ ವಾತಾವರಣವಿರುತ್ತದೆ ಉತ್ತಮ ಮಳೆಯಾಗಿ ನದಿ ಕೆರೆ ಜಲಾಶಯ ತುಂಬುತ್ತವೆ. ರೈತರಲ್ಲಿ ಮಂದಹಾಸ ಮೂಡುತ್ತದೆ ಹಾಗೆಯೇ ಯುವಕರು ವಿದ್ಯಾವಂತರಾಗಿ ಪದವೀಧರರಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ದೇಶ ಪ್ರಗತಿಯತ್ತ ಸಾಗುತ್ತದೆ ಇದನ್ನು ನಾವು ಪಾಲಿಸಲು ಮುಂದಾಗಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯದ ಜೊತೆಗೆ ತಾಪಮಾನ ಹೆಚ್ಚಾಗಿವೆ ಹಾಗಾಗಿ ಮುಂದಿನ ಪೀಳಿಗೆಯ ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ಸಸಿ ನೆಡಲು ಮುಂದಾಗಬೇಕು ಗ್ರಾಮೀಣ ವಾತಾವರಣ ಕ್ರಮೇಣ ಮಾಯವಾಗಿ ಕಾಂಕ್ರೀಟ್ ಮನೆಗಳ ನಿರ್ಮಾಣ ಹೆಚ್ಚಾಗಿದ್ದು ಮನೆಗಳ ತಾರಸಿಯಲ್ಲಿ ಕುಂಡಗಳಲ್ಲಿ ಫಲಪುಷ್ಪ ಸಸಿಗಳನ್ನು ಬೆಳಸಲು ಮುಂದಾದರೇ ಸಣ್ಣ ಪುಟ್ಟ ಪಕ್ಷಿಗಳಿಗೆ ನೆಲೆ ಕೊಟ್ಟಂತಾಗುತ್ತದೆ, ತಾಪಮಾನವನ್ನು ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸಬಹುದು, ಮನೆಗಳಲ್ಲಿರುವ ಚಿಕ್ಕ ಮಕ್ಕಳಿಗೆ ಪರಿಸರದ ಕಾಳಜಿ ಹೆಚ್ಚಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಕೃಷ್ಣರಾಜ ಕ್ಷೇತ್ರದ ಯುವಘಟಕ ಅಧ್ಯಕ್ಷ ಬಿ.ಇ.ಗಿರೀಶ್ ಗೌಡ, ಜೆಡಿಎಸ್ ಯುವ ಮುಖಂಡ ಅಜಯ್ ಶಾಸ್ತ್ರಿ, ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗೌಡ, ಸತೀಶ್ ಗೌಡ, ವಿದ್ಯಾರ್ಥಿಘಟಕದ ಅಭಿಷೇಕ್ ಇದ್ದರು.