ಸಿಇಟಿ: ಆಳ್ವಾಸ್‍ನ ದರ್ಶನ್‍ಗೆ 10ನೇ ರ‍್ಯಾಂಕ್

ಸಿಇಟಿ: ಆಳ್ವಾಸ್‍ನ ದರ್ಶನ್‍ಗೆ 10ನೇ ರ‍್ಯಾಂಕ್

DSK   ¦    May 25, 2019 06:40:26 PM (IST)
ಸಿಇಟಿ: ಆಳ್ವಾಸ್‍ನ ದರ್ಶನ್‍ಗೆ 10ನೇ ರ‍್ಯಾಂಕ್

ಮೂಡುಬಿದಿರೆ: ಸಿಇಟಿ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಸ್. ದರ್ಶನ್ ಸಮರ್ಥ ಅವರು ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ 10ನೇ ರ‍್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಮೂಲತಃ ಮೈಸೂರಿನ ಹೂಟಗಳ್ಳಿಯವರಾದ ದರ್ಶನ್ ಬಿ.ಎನ್.ವೈಎಸ್. ವಿಭಾಗದಲ್ಲಿ 43ನೇ ರ‍್ಯಾಂಕ್, ಪಶುವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ 71 ನೇ ರ‍್ಯಾಂಕ್, ಎಂಜಿನಿಯರಿಂಗ್ ವಿಭಾಗದಲ್ಲಿ 119ನೇ ರ‍್ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾ ವಿಭಾಗದಲ್ಲಿ 134ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಪ್ರೌಢಶಾಲಾ ಶಿಕ್ಷಕ ಎಸ್.ಡಿ.ಶಿವಣ್ಣ, ಗೃಹಿಣಿ ಜಲಜಾಕ್ಷಿಯವರ ಪುತ್ರ.

ಕಳೆದ ಪಿಯುಸಿ ಫಲಿತಾಂಶದಲ್ಲಿ 591 ಅಂಕ ಗಳಿಸಿ ಗಮನ ಸೆಳೆದಿದ್ದ ದರ್ಶನ್ ಆಳ್ವಾಸ್‍ನ ದತ್ತು ಸ್ವೀಕಾರ ಯೋಜನೆಯಡಿ ಶಿಕ್ಷಣಾವಕಾಶ ಪಡೆದಿದ್ದರು. ನೀಟ್ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ಅಲ್ಲಿ ಸಾವಿರದೊಳಗಿನ ರ‍್ಯಾಂಕ್ ಪಡೆಯುವ ವಿಶ್ವಾಸವಿದೆ. ಮುಂದೆ ಎಂಬಿಬಿಎಸ್ ಕಲಿತು ವೈದ್ಯನಾಗಬೇಕೆಂಬ ಕನಸಿದೆ ಎಂದು ಅನಿಸಿಕೆ ಹಂಚಿಕೊಂಡರು.