ಅಪ್ರಾಪ್ತ ಸೋದರಿಯರ ಅತ್ಯಾಚಾರ: ಆರೋಪಿಗಳಿಬ್ಬರ ಬಂಧನ

ಅಪ್ರಾಪ್ತ ಸೋದರಿಯರ ಅತ್ಯಾಚಾರ: ಆರೋಪಿಗಳಿಬ್ಬರ ಬಂಧನ

DA   ¦    Jul 11, 2018 05:48:23 PM (IST)
ಅಪ್ರಾಪ್ತ ಸೋದರಿಯರ ಅತ್ಯಾಚಾರ: ಆರೋಪಿಗಳಿಬ್ಬರ ಬಂಧನ

ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ವೇಣೂರು ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾಗಿರುವ ಮಾಳ ನಿವಾಸಿ ಶರತ್ (21) ಹಾಗೂ ಸುಲ್ಕೇರಿ ನಿವಾಸಿ ಪ್ರಕಾಶ್ (23) ಎಂಬವರನ್ನು ವೇಣೂರು ಪೋಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಈದು ಗ್ರಾಮದ ನಿವಾಸಿಗಳಾಗಿರುವ 17ರ ಹಾಗೂ 15ರ ಹರೆಯದ ಸಹೋದರಿಯರಿಬ್ಬರು ಸುಲ್ಕೇರಿಯಲ್ಲಿರುವ ಚಿಕ್ಕಪ್ಪನ ಮನೆಯಿಂದ ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ದೂರದ ಸಂಬಂಧಿಕರಾಗಿರುವ ಇಬ್ಬರು ಯುವಕರು ಸುಲ್ಕೇರಿಯ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಇವರು ಅಪ್ರಾಪ್ತ ಬಾಲಕಿಯರಲ್ಲಿ ತೀರಾ ಸಲುಗೆ ಬೆಳೆಸಿಕೊಂಡಿದ್ದಾರೆ ಹಾಗೂ ಯುವಕರು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಈ ಯುವತಿಯರನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಈ ವಿಚಾರ ಬಾಲಕಿಯರ ತಂದೆ ತಿಳಿದು ಅವರು ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಬಾಲಕಿಯರನ್ನು ಕರೆಸಿಕೊಂಡು ಮಾಹಿತಿ ಪಡೆದು ಬಳಿಕ ಇವರನ್ನು ಆರೋಗ್ಯ ತಪಾಸಣೆ ನಡೆಸಿದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ತಂದೆ ನೀಡಿರುವ ದೂರಿನಂತೆ ಪೊಲೀಸರು ಅತ್ಯಾಚಾರ ಹಾಗೂ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.