ಚರ್ಚ್ ನ ಫಾರ್ಮ್ ಹೌಸ್ ಗೆ ಬೆಂಕಿ

ಚರ್ಚ್ ನ ಫಾರ್ಮ್ ಹೌಸ್ ಗೆ ಬೆಂಕಿ

YB   ¦    Dec 06, 2017 07:41:55 PM (IST)
ಚರ್ಚ್ ನ ಫಾರ್ಮ್ ಹೌಸ್ ಗೆ ಬೆಂಕಿ

ಮೂಡುಬಿದಿರೆ: ಮಾಂಟ್ರಾಡಿ ಗ್ರಾಮದ ಪೆಂಚಾರು ಎಂಬಲ್ಲಿ ಶಿರ್ತಾಡಿ ಚರ್ಚ್ ಗೆ ಸಂಬಂಧಿಸಿದ ಫಾರ್ಮ್ ಹೌಸ್ ನಲ್ಲಿ ಬುಧವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 3 ಲಕ್ಷವರೆಗಿನ ಸೊತ್ತುಗಳು ನಾಶವಾಗಿದೆ.

ಮಾಂಟ್ರಾಡಿ ಪೆಂಚಾರಿನಲ್ಲಿ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್ ನ ಅಧೀನದಲ್ಲಿರುವ ಫಾರ್ಮ್ ಹೌಸ್ ನ ಹಳೇ ಮನೆಯಲ್ಲಿ ಬುಧವಾರ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ.

ಫಾರ್ಮ್ ಹೌಸ್ ನಲ್ಲಿದ್ದ ಸುಮಾರು ಒಂದು ಸಾವಿರ ರಬ್ಬರ್ ಶೀಟ್, ರಬ್ಬರ್ ಡ್ರೈಯರ್ ಹಾಗೂ ಮನೆಯ ಅರ್ಧಭಾಗ ಹಾನಿಗೊಳಗಾಗಿದೆ. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ಮೂಡುಬಿದಿರೆ ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್ ನೇತೃತ್ವದಲ್ಲಿ ಬೆಂಕಿ ಶಮನ ಮಾಡಲಾಯಿತು. ಸುಮಾರು ಮೂರು ಲಕ್ಷ ರೂಪಾಯಿವರೆಗಿನ ಸೊತ್ತುಗಳು ಬೆಂಕಿಗಾಹುತಿಯಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ.