ರಾತ್ರೋರಾತ್ರಿ ಬೀಗ ಜಡಿದ ಸುಜ್ಲಾನ್; ಬೀದಿಗೆ ಬಿದ್ದ ಕಾರ್ಮಿಕರು

ರಾತ್ರೋರಾತ್ರಿ ಬೀಗ ಜಡಿದ ಸುಜ್ಲಾನ್; ಬೀದಿಗೆ ಬಿದ್ದ ಕಾರ್ಮಿಕರು

Nov 14, 2017 04:33:05 PM (IST)
ರಾತ್ರೋರಾತ್ರಿ ಬೀಗ ಜಡಿದ ಸುಜ್ಲಾನ್; ಬೀದಿಗೆ ಬಿದ್ದ ಕಾರ್ಮಿಕರು

ಉಡುಪಿ: ಭಾರೀ ಆರ್ಥಿಕ ನಷ್ಟದಲ್ಲಿದ್ದ ಸುಜ್ಲಾನ್ ಕಂಪನಿಯು ರಾತ್ರೋರಾತ್ರಿ ಕಂಪೆನಿಗೆ ಬೀಗ ಜಡಿದಿರುವ ಕಾರಣ ನೂರಾರು ಮಂದಿ ಕಾರ್ಮಿಕರು ಬೀದಿ ಪಾಲಾಗಿರುವ ಘಟನೆ ನಡೆದಿದೆ.

ಸುಜ್ಲಾನ್ ಕಂಪೆನಿಯು ಗಾಳಿಯಂತ್ರಗಳ ರೆಕ್ಕೆಗಳನ್ನು ತಯಾರಿಸುತ್ತಾ ಇತ್ತು. ಪಡುಬಿದ್ರೆಯ ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಮಂದಿ ಕಾರ್ಮಿಕರು ಇಂದು ಬೆಳಗ್ಗೆ ಬಂದು ನೋಟಿಸ್ ನೋಡಿದಾಗ ಆಘಾತಕ್ಕೆ ಒಳಗಾಗಿದ್ದಾರೆ.

ನೂರಾರು ಮಂದಿ ಕಾರ್ಮಿಕರು ಇಂದು ಬೆಳಗ್ಗಿನಿಂದ ಪ್ರತಿಭಟನೆ ನಡೆಸಿದ್ದಾರೆ. ತಮಗೆ ಬಾಕಿ ಉಳಿದಿರುವ ಸವಲತ್ತುಗಳನ್ನು ನೀಡಬೇಕು ಮತ್ತು ಕಂಪೆನಿಯನ್ನು ಪುನರಾರಂಭಿಸಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸುಜ್ಲಾನ್ ಕಂಪೆನಿಯು ಭಾರೀ ನಷ್ಟದಲ್ಲಿತ್ತು. ಕೆಲವು ತಿಂಗಳಿಂದ ಕಾರ್ಮಿಕರಿಗೆ ಸರಿಯಾಗಿ ಸಂಬಳ ಕೂಡ ನೀಡಿರಲಿಲ್ಲ. ಆದರೆ ಕಾರ್ಮಿಕ ಸಂಘಟನೆ ಮಧ್ಯಪ್ರವೇಶಿಸಿದ ಬಳಿಕ ಕಂಪೆನಿ ಸಂಬಳ ಪಾವತಿಸಿತ್ತು.

More Images