ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಸೋದರಿಯರ ಅತ್ಯಾಚಾರ

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಸೋದರಿಯರ ಅತ್ಯಾಚಾರ

DA   ¦    Jul 11, 2018 09:40:59 AM (IST)
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಸೋದರಿಯರ ಅತ್ಯಾಚಾರ

ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರಗೈದಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯಲ್ಲಿ ಸಂಭವಿಸಿದೆ.

ನಾರಾವಿ ಸಮೀಪದ ಈದು ನಿವಾಸಿಗಳಾದ ಅಪ್ರಾಪ್ತ ಯುವತಿಯರು ಸುಲ್ಕೇರಿಯಲ್ಲಿರುವ ಅಜ್ಜಿ ಮನೆಯಲ್ಲಿ ವಾಸವಾಗಿದ್ದರು. ಇಲ್ಲಿಂದ ಯುವತಿಯರು ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ದೂರದ ಸಂಬಂಧಿಕ ಇಬ್ಬರು ಯುವಕರು ಸುಲ್ಕೇರಿಯ ಮನೆಗೆ ಬರುತ್ತಿದ್ದು, ಈ ಅಪ್ರಾಪ್ತ ಬಾಲಕಿಯರಲ್ಲಿ ತೀರಾ ಸಲುಗೆ ಬೆಳೆಸಿಕೊಂಡ ಯುವಕರು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ದೈಹಿಕವಾಗಿ ಬಳಸಿಕೊಂಡಿದ್ದಾರೆ.

ಬಾಲಕಿಯರ ತಂದೆ ಅಜ್ಜಿ ಮನೆಗೆ ಬಂದಾಗ ಪುತ್ರಿಯರು ಮನೆಯಲ್ಲಿ ಇರಲಿಲ್ಲ. ಸಂಶಯಗೊಂಡು ವಿಚಾರಿಸಿದಾಗ ಅವರಿಗೆ ದೂರದ ಸಂಬಂಧಿ ಯುವಕರೊಂದಿಗೆ ಪ್ರೇಮಸಂಬಂಧ ಬೆಳೆದಿರುವುದು ಗೊತ್ತಾಗಿದೆ. ಈಗಾಗಿ ಅವರು ವೇಣೂರು ಪೊಲೀಸರಿಗೆ ದೂರು ನೀಡಿದ್ದು, ಅತ್ಯಾಚಾರಗೈದಿರುವ ಬಗ್ಗೆ ಬೆಳಕಿಗೆ ಬಂದಿದೆ. ಪೊಲೀಸರು ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಒಬ್ಬಳು ಗರ್ಭಿಣಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮತ್ತೊಬ್ಬಳು ಕಿರಿಯ 10ರ ಹರೆಯದ ಸಹೋದರಿಯನ್ನು ಚೈಲ್ಡ್ ಲೈನ್ ಅಧಿಕಾರಿಗಳು ತಮ್ಮ ವಶದಲ್ಲಿರಿಸಿದ್ದಾರೆಂದು ತಿಳಿದುಬಂದಿದೆ.