ಕಾರ್ಕಳದಲ್ಲಿ ಕೋತಿ ಶವ ಪತ್ತೆ: ಜನರಿಗೆ ಮಂಗನ ಕಾಯಿಲೆ ಭೀತಿ

ಕಾರ್ಕಳದಲ್ಲಿ ಕೋತಿ ಶವ ಪತ್ತೆ: ಜನರಿಗೆ ಮಂಗನ ಕಾಯಿಲೆ ಭೀತಿ

HSA   ¦    Jan 11, 2019 03:35:39 PM (IST)
ಕಾರ್ಕಳದಲ್ಲಿ ಕೋತಿ ಶವ ಪತ್ತೆ: ಜನರಿಗೆ ಮಂಗನ ಕಾಯಿಲೆ ಭೀತಿ

ಕಾರ್ಕಳ: ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಬೆಟ್ಟು ಎಂಬಲ್ಲಿ ಕೋತಿ ಶವ ಪತ್ತೆಯಾಗಿದ್ದು, ಜನರು ಮಂಗನ ಕಾಯಿಲೆ ಭೀತಿಯಿಂದ ಬಳಲುತ್ತಿದ್ದಾರೆ.

ಗುರುವಾರ ಒಂದು ವರ್ಷದೊಳಗಿನ ಕೋತಿಯ ಶವವು ಪತ್ತೆಯಾಗಿದೆ. ಪಶು ವೈದ್ಯಾಧಿಕಾರಿ ಸುಬ್ರಹ್ಮಣ್ಯ ಪ್ರಸಾದ್ ಮರಣೋತ್ತರ ಪರೀಕ್ಷೆ ನಡೆಸಿ ಕಾಯಿಲೆ ಇಲ್ಲವೆಂದು ದೃಢಪಡಿಸಿದ್ದಾರೆ.

ಕೋತಿಯ ದೇಹದ ಮಾದರಿಗಳನ್ನು ಶಿವಮೊಗ್ಗದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಸುಬ್ರಹ್ಮಣ್ಯ ಪ್ರಸಾದ್ ತಿಳಿಸಿದ್ದಾರೆ.