ಎಸ್.ಡಿ.ಎಂ. ಶಾಲೆಯಲ್ಲಿ ವಾರ್ಲಿ ಚಿತ್ರಕಲೆಯ ಕಾರ್ಯಾಗಾರ

ಎಸ್.ಡಿ.ಎಂ. ಶಾಲೆಯಲ್ಲಿ ವಾರ್ಲಿ ಚಿತ್ರಕಲೆಯ ಕಾರ್ಯಾಗಾರ

DA   ¦    Feb 12, 2018 07:12:55 PM (IST)
ಎಸ್.ಡಿ.ಎಂ. ಶಾಲೆಯಲ್ಲಿ ವಾರ್ಲಿ ಚಿತ್ರಕಲೆಯ ಕಾರ್ಯಾಗಾರ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ(ಸಿ.ಬಿ.ಎಸ್.ಇ.),ಉಜಿರೆ ಇಲ್ಲಿಯ ಸಾಂಸ್ಕೃತಿಕ ಸಂಘ ಕಲಾ ಸಿಂಧು ಇದರ ಆಶ್ರಯದಲ್ಲಿ ಮಹಾರಾಷ್ಟ್ರದ ಪ್ರಸಿದ್ಧ ಜನಪದ ಚಿತ್ರಕಲೆ, ವಾರ್ಲಿಯ ಕಾರ್ಯಾಗಾರ ನಡೆಯಿತು.

ಸಂಘದ ಸಂಯೋಜಕ ಶಿಕ್ಷಕಿ ಸುಮಾ ಶ್ರೀನಾಥ್ ಅವರು ವಾರ್ಲಿ ಕಲೆಯ ಮಾಹಿತಿಯನ್ನು ನೀಡಿ, ವಿವಿಧ ವಾರ್ಲಿ ಚಿತ್ರಗಳನ್ನು ತೋರಿಸಿದರು. ವಿದ್ಯಾರ್ಥಿಗಳು, ವಾರ್ಲಿ ಕಲೆಯನ್ನೊಳಗೊಂಡ ಗ್ರೀಟಿಂಗ್ ಕಾರ್ಡ್ ಗಳನ್ನು ತಯಾರಿಸಿದರು, ಹಾಗೂ ಗೋಡೆಯ ಮೇಲೆ ಆಕರ್ಷಣೀಯ ವಾರ್ಲಿ ಚಿತ್ರಗಳನ್ನು ಬಿಡಿಸಿ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದ ಸಂಯೋಜಕರಾದ ಹರೀಶ್ ಬಳಂಜ ಹಾಗೂ ಅಮಿತಾ ಉಪಸ್ಥಿತರಿದ್ದರು.

More Images