ರಾಜೇಂದ್ರ ಕುಮಾರ್ ಗ್ರಾ.ಪಂ.ಸದಸ್ಯನಾಗಲು ಲಾಯಕ್ಕಲ್ಲ: ಪೂಜಾರಿ ಗುಡುಗು

ರಾಜೇಂದ್ರ ಕುಮಾರ್ ಗ್ರಾ.ಪಂ.ಸದಸ್ಯನಾಗಲು ಲಾಯಕ್ಕಲ್ಲ: ಪೂಜಾರಿ ಗುಡುಗು

HSA   ¦    Mar 14, 2019 04:54:11 PM (IST)
ರಾಜೇಂದ್ರ ಕುಮಾರ್ ಗ್ರಾ.ಪಂ.ಸದಸ್ಯನಾಗಲು ಲಾಯಕ್ಕಲ್ಲ: ಪೂಜಾರಿ ಗುಡುಗು

ಮಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ, ಬಂಡಾಯವಾಗಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಗುಡುಗಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ದನ ಪೂಜಾರಿ, ರಾಜೇಂದ್ರ ಕುಮಾರ್ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವ ಹೊಂದಿಲ್ಲ. ಆತ ಗ್ರಾಮ ಪಂಚಾಯತ್ ಸದಸ್ಯನಾಗಲೂ ಲಾಯಕ್ಕಲ್ಲ. ಹೀಗಾಗಿ ಹೈಕಮಾಂಡ್ ಅವರಿಗೆ ಟಿಕೆಟ್ ಕೊಡಬಾರದು. ನಾನು ಇನ್ನೆರಡು ದೆಹಲಿಗೆ ಹೋಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎ.ಕೆ. ಆ್ಯಂಟನಿ ಅವರನ್ನು ಭೇಟಿ ಮಾಡಿ ರಾಜೇಂದ್ರ ಕುಮಾರ್ ಗೆ ಟಿಕೆಟ್ ಕೊಡಬಾರದು ಎಂದು ಮನವರಿಕೆ ಮಾಡಿಕೊಡುವೆ ಎಂದರು.

ಹೈಕಮಾಂಡ್ ಮಾಜಿ ಸಚಿವರಾದ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಬಿ.ಕೆ. ಹರಿಪ್ರಸಾದ್ ಅವರಿಗೆ ಟಿಕೆಟ್ ಕೊಟ್ಟರೆ ಬೆಂಬಲ ನೀಡುವೆ. ಆದರೆ ರಾಜೇಂದ್ರ ಕುಮಾರ್ ಗೆ ಟಿಕೆಟ್ ಕೊಟ್ಟರೆ ಬಂಡಾಯ ನಿಲ್ಲುವೆ. ಅದೇ ರೀತಿಯಾಗಿ ಐವನ್ ಡಿಸೋಜಾಗೆ ಟಿಕೆಟ್ ಕೊಟ್ಟರೂ ಬಂಡಾಯವಾಗಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.