ಬೈಕ್ ಅಪಘಾತ: ಯುವಕ ಸಾವು

ಬೈಕ್ ಅಪಘಾತ: ಯುವಕ ಸಾವು

DA   ¦    Jan 11, 2019 09:57:45 AM (IST)
ಬೈಕ್ ಅಪಘಾತ: ಯುವಕ ಸಾವು

ಬೆಳ್ತಂಗಡಿ: ಬೈಕ್ ಅಪಘಾತವೊಂದರಲ್ಲಿ ಯುವ ಸವಾರನೊರ್ವ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಅಳದಂಗಡಿಯಲ್ಲಿ ನಡೆದಿದೆ. ಮೃತ ಯುವಕನನ್ನು ಕಾರ್ಕಳ ಈದು ಪೆರ್ನೋಡಿ ನಿವಾಸಿ ರಾಧಾಕೃಷ್ಣ ಭಟ್ ಅವರ ಪುತ್ರ ಅಭಿಷೇಕ್ (19) ಎಂದು ಗುರುತಿಸಲಾಗಿದೆ.

ಎಲೆಕ್ಟ್ರಿಶಿಯನ್ ವೃತ್ತಿ ಮಾಡುತ್ತಿರುವ ಇವರು ಗುರುವಾಯನಕೆರೆ ಕಡೆಯಿಂದ ಅಳದಂಗಡಿಗೆ ಬರುತ್ತಿದ್ದಾಗ ಅಳದಂಗಡಿ ಸರಕಾರಿ ಶಾಲೆಯ ಬಳಿಯ ತಿರುವಿನಲ್ಲಿ  ಬೈಕ್‍ನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಯಿತು ಎನ್ನಲಾಗಿದೆ. ತಲೆಯ ಭಾಗಕ್ಕೆ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ರಾಧಾಕೃಷ್ಣ ಭಟ್ ಅವರಿಗೆ ಓರ್ವನೇ ಪುತ್ರ. ಪುತ್ರಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ರಾಧಾಕೃಷ್ಣ ಭಟ್ ಅವರು ಹೊಸ್ಮಾರಿನ ಹೊಟೇಲ್ ಒಂದರಲ್ಲಿ ದುಡಿಯುತ್ತಿದ್ದು, ತಾಯಿ ಮನೆಕೆಲಸ ನೋಡಿಕೊಳ್ಳುತ್ತಿದ್ದಾರೆ. ರಾಘವ ಎಂಬುವರು  ನೀಡಿದ ದೂರಿನಂತೆ ವೇಣೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.