ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ವತಿಯಿಂದ ವಿಚಾರಗೋಷ್ಟಿ ಸಭೆ

ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ವತಿಯಿಂದ ವಿಚಾರಗೋಷ್ಟಿ ಸಭೆ

Jan 10, 2017 02:52:10 PM (IST)

ಉಡುಪಿ : ಕಳೆದ ಆರೇಳು ತಿಂಗಳಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಂ ಸಮುದಾಯದ ಸಮಾಜ ಸೇವೆಯ ಮೂಲಕ ವರದಕ್ಷಿಣೆ ರಹಿತ ಸಮಾಜವನ್ನು ನಿರ್ಮಿಸಲು ಪಣತೊಟ್ಟಿರುವ ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ತಂಡವು ಜಿಲ್ಲೆಯ ಹಲವು ಭಾಗದ ಪ್ರಮುಖ ಜಮಾಅತ್ ನ ಸಂದರ್ಶನದೊಂದಿಗೆ ವಿಚಾರಗೋಷ್ಟಿ ಕಾರ್ಯಕ್ರಮವನ್ನು ಆಯೋಜಿಸಿ ತಮ್ಮ ಫೀಲ್ಡ್ ವರ್ಕ್ ಮಾಡುತ್ತಿದೆ.

ಇದರ ಮುಂದಿನ ಭಾಗವಾಗಿ ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ವತಿಯಿಂದ ವಿಚಾರಗೋಷ್ಟಿ ಸಭೆಯು ಇಂದು(ಮಂಗಳವಾರ) ಪಡುಬಿದ್ರೆಯ ನವರಂಗ್ ಹೋಟೆಲಿನ ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿ ವಿವಿಧ ಮುಸ್ಲಿಮ್ ಸಂಘಟನೆಯ ನೇತಾರರೂ ಊರಿನ ಪ್ರಮುಖರೂ ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ತಂಡದ ಎಲ್ಲಾ ಕಾರ್ಯದರ್ಶಿಗಳೂ ಆಸೀನರಾಗಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಮಜೀದ್ ಉಸ್ತಾದ್ (ಕಾರ್ಯದರ್ಶಿ,ಬ್ಯಾರಿ ನಿಕಾಹ್ ಹೆಲ್ಪ್ ಲೈನ್) ವಹಿಸಿ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಸಮೀರ್ ನೆಲ್ಯಾಡಿ ಸಭೆಗೆ ಆಗಮಿಸಿದ ಅಥಿತಿಗಳನ್ನು ವೇದಿಕೆಗೆ ಆಹ್ವಾನಿಸಿ ಸ್ವಾಗತ ಭಾಷಣಗೈದರು. ಅಫ್ತಾಬ್ ಬಂದರ್ ರವರು ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ನ ರೂಪು ರೇಷೆ ಹಾಗೂ ಕಾರ್ಯವೈಖರಿಯನ್ನು ನೆರೆದ ಸಭಿಕರಿಗೆ ವಿವರಿಸುತ್ತಾ ವಿಷಯ ಮಂಡನೆಗೈದರು. ನಂತರ ಪ್ರಮುಖ ಭಾಷಣಗೈದ ಎಂ.ಹೆಚ್.ಎಂ. ಕಲಂದರ್ ರಝ್ವೀ ಉಸ್ತಾದ್ (ಕಾರ್ಯದರ್ಶಿ, ಬ್ಯಾರಿ ನಿಕಾಹ್ ಹೆಲ್ಪ್ ಲೈನ್, ಪಡುಬಿದ್ರಿ ವಲಯ ) ರವರು ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ತಂಡದ ಉದ್ದೇಶವನ್ನು ಹಾಗೂ ಮುಂದಿನ ಹಲವು ಯೋಜನೆಗಳನ್ನು ವಿವರಿಸುತ್ತಾ ವರದಕ್ಷಿಣೆ ರಹಿತ ಮದುವೆಯ ಮಹತ್ವವನ್ನು ಸಭಿಕರಿಗೆ ಅರಿವು ಮೂಡಿಸಿದರು. ತದ ನಂತರ ಮುಕ್ತ ಚರ್ಚಾಕೂಟವನ್ನು ನಡೆಸಿ ಕಾರ್ಯಕ್ಷಮತೆಯ ಸುಧಾರಣೆಗಾಗಿ ಕೆಲವೊಂದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಇಸ್ಮಾಯಿಲ್ ಕಾನ ಆಗಮಿಸಿದ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೂ ಹಾಗೂ ಸಬೆಯಲ್ಲಿ ಉಪಸ್ಥಿತರಿದ್ದ ಸಮುದಾಯ ಪ್ರೇಮಿಗಳಿಗೆ ಧನ್ಯವಾದ ಸಮರ್ಪಿಸುತ್ತಾ ಸ್ವಲಾತ್ ನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

More Images