ರಾಜ್ಯಾಧ್ಯಕ್ಷರ ಭರವಸೆ: ಸುಳ್ಯ ಬಿಜೆಪಿಯ ಅಸಹಾಕಾರ ಚಳವಳಿ ಹಿಂದಕ್ಕೆ

ರಾಜ್ಯಾಧ್ಯಕ್ಷರ ಭರವಸೆ: ಸುಳ್ಯ ಬಿಜೆಪಿಯ ಅಸಹಾಕಾರ ಚಳವಳಿ ಹಿಂದಕ್ಕೆ

GK   ¦    Sep 09, 2019 10:00:17 AM (IST)
ರಾಜ್ಯಾಧ್ಯಕ್ಷರ ಭರವಸೆ: ಸುಳ್ಯ ಬಿಜೆಪಿಯ ಅಸಹಾಕಾರ ಚಳವಳಿ ಹಿಂದಕ್ಕೆ

ಸುಳ್ಯ: ರಾಜ್ಯ ಸಚಿವ ಸಂಪುಟದಲ್ಲಿ ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ಸಿಗದಿರುವುದನ್ನು ಪ್ರತಿಭಟಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಘೋಷಿಸಿದ್ದ ಅಸಹಕಾರ ಚಳವಳಿಯನ್ನು ಹಿಂಪಡೆಯಲಾಗಿದೆ.

ಬಿಜೆಪಿ ಮಂಡಲ ಸಮಿತಿ ಮುಂದಿರಿಸಿದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ನಡೆಸುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್‍ಕುಮಾರ್ ಕಟೀಲ್ ನೀಡಿದ ಭರವಸೆಯ ಹಿನ್ನಲೆಯಲ್ಲಿ ಅಸಹಕಾರ ಚಳವಳಿಯನ್ನು ಕೈ ಬಿಡಲಾಗಿದೆ.

ಶಾಸಕ ಎಸ್.ಅಂಗಾರರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಸೆ.14ರಂದು ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ನಾಯಕರು, ಶಾಸಕರು ಮತ್ತು ಸುಳ್ಯ ಬಿಜೆಪಿ ಮುಖಂಡರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷರು ನೀಡಿದ ಭರವಸೆಯ ಮೇರೆಗೆ ಅಸಹಕಾರ ಚಳವಳಿಯನ್ನು ಕೈ ಬಿಡುವುದಾಗಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.

ರಾಜ್ಯ ನಾಯಕರಿಂದ ಭರವಸೆ ದೊರೆತ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯರಾಗಲು ಮತ್ತು ರಾಜೀನಾಮೆ ನೀಡಿದ್ದ ಜನಪ್ರತಿನಿಧಿಗಳು ರಾಜಿನಾಮೆ ಪಡೆದು ತಮ್ಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸತತ ಆರು ಬಾರಿ ಗೆಲುವು ಸಾಧಿಸಿದ ಹಿರಿಯ ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಪ್ರತಿಭಟಸಿ ಸುಳ್ಯ ಬಿಜೆಪಿ ಮಂಡಲ ಸಮಿತಿಯು ಜಿಲ್ಲೆಯ ಮತ್ತು ರಾಜ್ಯ ಬಿಜೆಪಿ ನೇತೃತ್ವದೊಂದಿಗೆ ಅಸಹಕಾರ ಚಳವಳಿ ಘೋಷಿಸಿದ್ದರು. ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ಸಹಕಾರಿ ಸಂಘ, ಎಪಿಎಂಸಿಯ ಬಿಜೆಪಿ ಪ್ರತಿನಿಧಿಗಳು ಪಕ್ಷದ ಅಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸಿದ್ದರು.