ಮೊಬೈಲ್ ಟವರ್ ನಿಂದ ಹಾರಿ 16ರ ಯುವಕ ಸಾವಿಗೆ ಶರಣು

ಮೊಬೈಲ್ ಟವರ್ ನಿಂದ ಹಾರಿ 16ರ ಯುವಕ ಸಾವಿಗೆ ಶರಣು

SC   ¦    Oct 12, 2017 05:12:02 PM (IST)
ಮೊಬೈಲ್ ಟವರ್ ನಿಂದ ಹಾರಿ 16ರ ಯುವಕ ಸಾವಿಗೆ ಶರಣು

ಕಾಸರಗೋಡು:ಮೊಬೈಲ್ ಟವರ್ ನಿಂದ ಹಾರಿ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಸಮೀಪದ ವಿದ್ಯಾಗಿರಿಯಲ್ಲಿ ನಡೆದಿದೆ. ವಿದ್ಯಾಗಿರಿ ಬಾಪುಮೂಲೆಯ ಸೀತಾರಾಮ ಎಂಬವರ ಪುತ್ರ ಮನೋಜ್(16) ಆತ್ಮಹತ್ಯೆ ಮಾಡಿಕೊಂಡ ಬಾಲಕ.

ಈತನ ತಾಯಿ ಲೀಲಾವತಿ ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದು, ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಇದರ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ಬುಧವಾರ ರಾತ್ರಿ ಊಟ ಮಾಡಿ ಮನೆಯಿಂದ ಹೊರತೆರಳಿದ್ದ ಮನೋಜ್ ತಡರಾತ್ರಿಯಾದರೂ ಮನೆಗೆ ಮರಳದಿದ್ದುದರಿಂದ ಮನೆಯವರು ಹುಡುಕಾಟ ನಡೆಸಿದಾಗ ಮನೆಯ ಅಲ್ಪ ದೂರದಲ್ಲಿರುವ ಮೊಬೈಲ್ ಟವರ್ ನ ಕೆಳಗಡೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಬದಿಯಡ್ಕ ಬಳಿಕ ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.

ಎಸ್ಎಸ್ಎಲ್ಸಿ ವರೆಗೆ ಶಿಕ್ಷಣ ಪೂರೈಸಿದ ಮನೋಜ್ ಪ್ಲಸ್ವನ್ ಪ್ರವೇಶಾತಿ ಲಭಿಸದಿದ್ದುದರಿಂದ ಉನ್ನತ ಶಿಕ್ಷಣಕ್ಕೆ ತೆರಳಲಿಲ್ಲ. ತಂದೆ ಸೀತಾರಾಮ ಕೂಲಿ ಕಾರ್ಮಿಕನಾಗಿದ್ದು, ಇವರ ಆದಾಯದಿಂದ ಪತ್ನಿಯ ಚಿಕಿತ್ಸೆ, ಕುಟುಂಬದ ನಿತ್ಯವೆಚ್ಚಗಳನ್ನು ನಿಭಾಯಿಸಲಾಗುತ್ತಿದೆ. ತಾಯಿಯ ಅನಾರೋಗ್ಯದ ಬಗ್ಗೆ ಮನೋಜ್ ಸ್ನೇಹಿತರಲ್ಲಿ ಹೇಳಿಕೊಳ್ಳುತ್ತಿದ್ದನು. ಬದಿಯಡ್ಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.