ರಸ್ತೆ ಅಪಘಾತದಲ್ಲಿ ಲಾರಿಯಡಿಗೆ ಸಿಲುಕಿ ಯುವಕ ಸಾವು : ಬೈಕ್ ನಲ್ಲಿ ಗಾಂಜಾ ಪತ್ತೆ

ರಸ್ತೆ ಅಪಘಾತದಲ್ಲಿ ಲಾರಿಯಡಿಗೆ ಸಿಲುಕಿ ಯುವಕ ಸಾವು : ಬೈಕ್ ನಲ್ಲಿ ಗಾಂಜಾ ಪತ್ತೆ

Oct 12, 2017 10:37:15 AM (IST)
ರಸ್ತೆ ಅಪಘಾತದಲ್ಲಿ ಲಾರಿಯಡಿಗೆ ಸಿಲುಕಿ ಯುವಕ ಸಾವು : ಬೈಕ್ ನಲ್ಲಿ ಗಾಂಜಾ ಪತ್ತೆ

ತೊಕ್ಕೊಟ್ಟು: ಬೈಕ್ ಸವಾರ ಲಾರಿಯಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ತೊಕ್ಕೊಟ್ಟು ಜಂಕ್ಷನ್ ನಲ್ಲಿ ನಡೆದಿದೆ. ಮೃತಪಟ್ಟವರನ್ನು ಬೆಳ್ತಂಗಡಿಯ ಕೆ.ಸಿ ರೋಡ್ ನಿವಾಸಿಯಾದ ಸಲೀಂ(30) ಎಂದು ಗುರುತಿಸಲಾಗಿದೆ.

ಮೃತನ ಬೈಕನ್ನು ಪೊಲೀಸರು ಪರಿಶೀಲಿಸಿದಾಗ ಎರಡು ಪ್ಯಾಕೇಟ್ ಗಾಂಜಾ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೈಕ್ ನಲ್ಲಿ ತೆರಳುವಾಗ ಬೈಕ್ ಸ್ಟಾಂಡ ನ್ನು ತೆಗೆಯದೆ ಚಲಿಸುತ್ತಿದ್ದಾಗ ಆಯತಪ್ಪಿ ತಪ್ಪಿ ಕೆಳಗಡೆ ಬಿದ್ದದ್ದಾನೆ.

ಈ ಸಂದರ್ಭ ಹಿಂದೆಯಿಂದ ಬಂದ ಲಾರಿಯಡಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More Images