ಮನೆಯವರಿಗೆ ಮೆಣಸಿನ ಪುಡಿ ಎರಚಿ ಚಿನ್ನಾಭರಣ ಕಳ್ಳತನ

ಮನೆಯವರಿಗೆ ಮೆಣಸಿನ ಪುಡಿ ಎರಚಿ ಚಿನ್ನಾಭರಣ ಕಳ್ಳತನ

SK   ¦    Jul 11, 2018 02:18:17 PM (IST)
ಮನೆಯವರಿಗೆ ಮೆಣಸಿನ ಪುಡಿ ಎರಚಿ ಚಿನ್ನಾಭರಣ ಕಳ್ಳತನ

ಕಾಸರಗೋಡು: ಕಿಟಿಕಿ ಮುರಿದು ಒಳನುಗ್ಗಿದ ಕಳ್ಳರು ಮನೆಯವರ ಮುಖಕ್ಕೆ ಮೆಣಸಿನ ಹುಡಿ ಎರಚಿ ಹತ್ತು ಪವನ್ ಚಿನ್ನಾಭರಣ ದರೋಡೆ ಮಾಡಿದ ಘಟನೆ ಬುಧವಾರ ಮುಂಜಾನೆ ಬದಿಯಡ್ಕ ಠಾಣಾ ವ್ಯಾಪ್ತಿಯ ನೆಲ್ಲಿಕಟ್ಟೆ ಚೂರಿತ್ತಡ್ಕದಲ್ಲಿ ನಡೆದಿದೆ. ಚೂರಿಪಳ್ಳದ ದಿವಂಗತ ಬೀರಾನ್ ಹಾಜಿ ಎಂಬವರ ಮನೆಯಲ್ಲಿ ಮುಂಜಾನೆ ೩.೩೦ ರ ಸುಮಾರಿಗೆ ದರೋಡೆ ನಡೆದಿದೆ.

ಮನೆಯ ಕಿಟಿಕಿ ಮುರಿದು ಒಳನುಗ್ಗಿದ ದರೋಡೆ ಕೋರ ರು ಮಲಗಿದ್ದ ಬೀರನ್ ಹಾಜಿಯವರ ಪತ್ನಿ ಆಮಿನಾ ಮತ್ತು ಸೊಸೆ ಮರಿಯಾಂಬಿ ಮುಖಕ್ಕೆ ಮೆಣಸಿನ ಹುಡಿ ಎರಚಿದ್ದು , ಬೊಬ್ಬೆ ಹಾಕಿದಾಗ ಎಚ್ಚ್ಚೆತ್ತ ಮಕ್ಕಳ ನ್ನು ಚಾಕು ತೋರಿಸಿ ಬೆದರಿಸಿದ್ದು ಬಳಿಕ ಮನೆಯಲ್ಲಿದ್ದ ಹತ್ತು ಪವನ್ ಚಿನ್ನಾಭರಣ ದರೋಡೆ ಮಾಡಲಾಗಿದೆ.

ಗಾಯಗೊಂಡ ಆಮಿನಾ ( ೪೫) ಮತ್ತು ಮರಿಯಾಂಬಿ (೨೪) ಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಿಯಾಂಬಿಯವರ ಪತಿ ಗಲ್ಫ್ ಉದ್ಯೋಗಿಯಾಗಿದ್ದಾರೆ. ಸುದ್ದಿ ತಿಳಿದು ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದ್ದು , ತನಿಖೆ ನಡೆಸುತ್ತಿದ್ದಾರೆ