ನಂತೂರಲ್ಲಿ ಭೀಕರ ಅಪಘಾತ: ಮಹಿಳೆ ಸಾವು, 15 ಜನರಿಗೆ ಗಾಯ

ನಂತೂರಲ್ಲಿ ಭೀಕರ ಅಪಘಾತ: ಮಹಿಳೆ ಸಾವು, 15 ಜನರಿಗೆ ಗಾಯ

YK   ¦    Dec 07, 2017 11:15:36 AM (IST)
ನಂತೂರಲ್ಲಿ ಭೀಕರ ಅಪಘಾತ: ಮಹಿಳೆ ಸಾವು, 15 ಜನರಿಗೆ ಗಾಯ

ಮಂಗಳೂರು: ಇಂದು ಇಲ್ಲಿನ ನಂತೂರು ಜಂಕ್ಷನ್ ನಲ್ಲಿ ಖಾಸಗಿ ಬಸ್ ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಬ್ಬ ಸಾವನ್ನಪ್ಪಿದ್ದು, 15 ಜನರಿಗೆ ಗಾಯಗಳೊಂದಿಗೆ ಪರಾಗಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ನು 60 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಕರ್ನಕಟ್ಟೆಯಿಂದ ಬರುತ್ತಿದ್ದ ಖಾಸಗಿ ಬಸ್ಸ್ ಹಾಗೂ ಲಾರಿ ಮಧ್ಯೆ ಅಪಘಾತ ನಡೆದಿದ್ದು ಈ ವೇಳೆ ಲಾರಿ ಕಾರಿಗೆ ಎರಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬೊಂದೆಲ್ ನಲ್ಲಿ ಟ್ರಾಕ್ಟರ್ ಪಲ್ಟಿ: ಬೊಂದೆಲ್ ಲಾರೆನ್ಸ್ ಚರ್ಚ ಬಳಿ ನಡೆದ ಅಪಘಾತದಲ್ಲಿ ಟ್ರಾಕ್ಟರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

More Images