ಆಕಸ್ಮಿಕವಾಗಿ ಫಲ್ಗುಣಿ ನದಿಯಲ್ಲಿ ಮುಳುಗಿ ಇಬ್ಬರು ಸಾವು

ಆಕಸ್ಮಿಕವಾಗಿ ಫಲ್ಗುಣಿ ನದಿಯಲ್ಲಿ ಮುಳುಗಿ ಇಬ್ಬರು ಸಾವು

YK   ¦    Mar 26, 2020 01:10:42 PM (IST)
ಆಕಸ್ಮಿಕವಾಗಿ ಫಲ್ಗುಣಿ ನದಿಯಲ್ಲಿ ಮುಳುಗಿ ಇಬ್ಬರು ಸಾವು

ಬೆಳ್ತಂಗಡಿ: ಇಲ್ಲಿನ ಕೊಡಿಂಗೇರಿ ಎಂಬಲ್ಲಿ ಫಲ್ಗುಣಿ ನದಿಯಲ್ಲಿ ಇಬ್ಬರು ನೀರುಪಾಲಾಗಿರುವ ಘಟನೆ ನಡೆದಿದೆ.

ಮೃತರನ್ನು ಶಿರ್ತಾಡಿಯ ಪಣಪಿಲ್ ದರ್ಖಾಸ್ ನಿವಾಸಿ ವಸಂತಿ ಮತ್ತು ಮಹಾಬಲ ಪೂಜಾರಿ ದಂಪತಿ ಪುತ್ರ ವಾಸುದೇವ(೨೨) ಮತ್ತು ಶೀರ್ತಾಡಿ ಗ್ರಾಮದ ಕೊಣಾಜೆ ಕೊಡಿಂಜ ನಿವಾಸಿ ಸಾಧು ಪೂಜಾರಿ ಮತ್ತು ಗೀತಾ ದಂಪತಿ ಪುತ್ರ ಇಶಾನ್(೮) ಎಂದು ಗುರುತಿಸಲಾಗಿದೆ.

ಹೊಸಂಗಡಿ ಗ್ರಾಮದ ಸುನಿಲ್ ಎಂಬವರ ಮನೆಗೆ ಬಂದ ಇವರಿಬ್ಬರು ತೋಟದ ಕಡೆ ತೆರಳಿದ್ದಾರೆ. ಹೊತ್ತಾದರೂ ಕಾಣದೆ ಇದ್ದಾಗ ಇವರಿಬ್ಬರ ಮೃತದೇಹ ಫಲ್ಲುಣಿ ನದಿಯ ದಡದಲ್ಲಿ ಸಿಕ್ಕಿದೆ. ಸ್ಥಳಕ್ಕೆ ವೇಣೂರು ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.