ಬೆಳ್ತಂಗಡಿ ಪೇಟೆಯಲ್ಲಿ ಪೊಲೀಸ್ ಧ್ವಜ ಪಥಸಂಚಲನ

ಬೆಳ್ತಂಗಡಿ ಪೇಟೆಯಲ್ಲಿ ಪೊಲೀಸ್ ಧ್ವಜ ಪಥಸಂಚಲನ

DA   ¦    Apr 15, 2019 07:41:23 PM (IST)
ಬೆಳ್ತಂಗಡಿ ಪೇಟೆಯಲ್ಲಿ ಪೊಲೀಸ್ ಧ್ವಜ ಪಥಸಂಚಲನ

ಬೆಳ್ತಂಗಡಿ: ಲೋಕಸಭಾ ಚುನಾವಣೆ ಎ.18ರಂದು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮತದಾರರು ಭಯಮುಕ್ತರಾಗಿ ಮತದಾನ ನಡೆಸಬೇಕು ಎಂಬ ಉದ್ದೇಶದಿಂದ ಪೋಲೀಸ್ ಇಲಾಖೆ, ಇಂಡೋ ಟಿಬೆಟಿಯನ್ ಬಾರ್ಡ್ ಆಫ್ ಪೋಲೀಸ್, ಸಂಚಾರಿ ಪೋಲೀಸ್ ವತಿಯಿಂದ ಸೋಮವಾರ ಪೋಲೀಸ್ ಧ್ವಜ ಪಥಸಂಚಲನ ನಡೆಯಿತು.

ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲಿನಿಂದ ಹಾಗೂ ಬೆಳ್ತಂಗಡಿಯ ಸಂತೆಕಟ್ಟೆಯಿಂದ ಅಂಬೇಡ್ಕರ್ ಭವನದವರೆಗೆ ನಡೆಯಿತು. ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ, ಎಸ್‍ಐ ರವಿ ಡಿ.ಎಸ್, ಸಂಚಾರಿ ಠಾಣಾ ಎಸ್‍ಐ ನಾರಾಯಣ ಗಾಣಿಗ, ಕಮಾಂಡೆಂಟ್ ಗುರುದತ್ ಭಟ್ ನೇತೃತ್ವದಲ್ಲಿ ನಡೆಯಿತು.

ಸಂಚಾರ ಅಡಚಣೆ: ಪಥಸಂಚಲನದಿಂದಾಗಿ ಗಂಟೆ ಕಾಲ ಬೆಳ್ತಂಗಡಿ ಪಟ್ಟಣದಲ್ಲಿ ಸಂಚಾರ ಅಸ್ತವ್ಯವಸ್ತವಾಯಿತು. ಹಲವಾರು ನಾಗರಿಕರಿಗೆ ತಮ್ಮ ನಿಗದಿತ ಸ್ಥಾನವನ್ನು ನಿಗದಿತ ಸಮಯದೊಳಗೆ ತಲುಪಲು ಅಸಾಧ್ಯವಾಯಿತು. ಸರಕಾರಿ, ಖಾಸಗಿ ಬಸ್ ಗಳ ಸಮಯ ಪಾಲನೆಗೆ ಅಡಚಣೆ ಉಂಟಾಯಿತು. ಕೆಲ ಕಾಲ ರಸ್ತೆಯ ಎರಡೂ ಬದಿ ವಾಹನಗಳ ದಟ್ಟಣೆಯಾಗಿ ಸಂಚಾರಕ್ಕೆ ತಡೆಯುಂಟಾಗಿತ್ತು. ರಿಕ್ಷಾದವರು, ಪಾದಾಚಾರಿಗಳೂ, ಸೋಮವಾರದ ಸಂತೆ ವ್ಯಾಪಾರಸ್ಥರು ತೊಂದರೆಗೊಳಗಾದರು.