ಕೊರೋನಾ ವೈರಸ್ ಭೀತಿ: ಸುಳ್ಯದಲ್ಲಿ ಲಾಕ್ ಡೌನ್ ಸಂಪೂರ್ಣ ಪಾಲನೆ

ಕೊರೋನಾ ವೈರಸ್ ಭೀತಿ: ಸುಳ್ಯದಲ್ಲಿ ಲಾಕ್ ಡೌನ್ ಸಂಪೂರ್ಣ ಪಾಲನೆ

GK   ¦    Mar 23, 2020 04:18:07 PM (IST)
ಕೊರೋನಾ ವೈರಸ್ ಭೀತಿ: ಸುಳ್ಯದಲ್ಲಿ ಲಾಕ್ ಡೌನ್ ಸಂಪೂರ್ಣ ಪಾಲನೆ

ಸುಳ್ಯ: ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿರುವ ಮತ್ತು ಸೆಕ್ಷನ್ 144 ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ಸೋಮವಾರ ಅವಶ್ಯ ಸೇವೆಗಳಿಗಳು ಮಾತ್ರ ಲಭ್ಯವಾಗಿತ್ತು. ನಿರಂತರ ಎರಡನೇ ದಿನವೂ ಸುಳ್ಯ ನಗರದಲ್ಲಿ ಬಂದ್‍ನ ವಾತಾವರಣ ಕಂಡು ಬಂದಿತ್ತು.

ದಿನಸಿ ಅಂಗಡಿ, ಮೆಡಿಕಲ್ ಶಾಫ್‍ಗಳು, ತರಕಾರಿ ಅಂಗಡಿಗಗಳು, ಮೀನು ಮಾರುಕಟ್ಟೆ, ಬ್ಯಾಂಕಿಂಗ್ ಸೇವೆ, ಪೆಟ್ರೋಲ್ ಪಂಪ್ ಮತ್ತಿತರ ಅಗತ್ಯ ಸೇವೆಗಳು ತೆರೆದು ಕಾರ್ಯಾಚರಿಸಿತ್ತು. ಕೆಎಸ್‍ಆರ್‍ಟಿಸಿ, ಖಾಸಗೀ ಬಸ್‍ಗಳು, ಅಟೋ ರಿಕ್ಷಾ ಸೇರಿದಂತೆ ಯಾವುದೇ ಸಾರ್ವಜನಿಕ ವಾಹನಗಳು ಓಡಾಟ ನಡೆಸಿಲ್ಲ. ಬೆಳಗ್ಗೆ ನಗರದಲ್ಲಿ ಖಾಸಗೀ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದವು. ಜನರು ಒಟ್ಟು ಸೇರದಂತೆ ಪೊಲೀಸರು ಸೂಚನೆ ನೀಡಿ ಜನ ಸಂದಣಿ ಸೇರುವುದನ್ನು ತಡೆದರು. ಬೆಳಗ್ಗೆ ತೆರೆದಿದ್ದ ಕೆಲವು ಇತರ ಅಂಗಡಿಗಳನ್ನು ಮುಚ್ಚುವಂತೆ ಪೊಲೀರು ಸೂಚಿಸಿದ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚು ನಗರಕ್ಕೆ ಆಗಮಿಸಿದ್ದರು. ಮಧ್ಯಾಹ್ನದ ಬಳಿಕ ವಾಹನ ಸಂಚಾರವೂ ವಿರಳವಾಗಿತ್ತು. ಸುಳ್ಯ ತಾಲೂಕಿನ ಗಡಿ ರಸ್ತೆಗಳನ್ನು ಈಗಾಗಲೇ ಮುಚ್ಚಲಾಗಿದ್ದು ಕೇರಳ ಮತ್ತಿತರ ಕಡೆಗಳಿಂದ ಬರುವ ವಾಹನಗಳಿಗೆ ನಿಷೇಧ ಹೇರಲಾಗಿದ್ದು ಕಟ್ಟು ನಿಟ್ಟಿನ ಎಚ್ಚರಿಕೆ ವಹಿಸಲಾಗುತಿದೆ. ಕರೋನಾ ಮಹಾ ಮಾರಿಯನ್ನು ತಡೆಯುವ ಸಂಕಲ್ಪ ತೊಟ್ಟು ತಾಲೂಕಿನ ಜನತೆ ಬಹುತೇಕರು ಎರಡನೇ ದಿನವೂ ಮನೆಯಲ್ಲಿಯೇ ಕಳೆದರು.

More Images