ಮೂಡುಬಿದಿರೆ ಕಡಂದಲೆಯ ಕಿರಣ್ ಭಟ್ ಗೆ ಆಸ್ಕರ್ ತಂತ್ರಜ್ಞಾನ ಪ್ರಶಸ್ತಿ

ಮೂಡುಬಿದಿರೆ ಕಡಂದಲೆಯ ಕಿರಣ್ ಭಟ್ ಗೆ ಆಸ್ಕರ್ ತಂತ್ರಜ್ಞಾನ ಪ್ರಶಸ್ತಿ

YB   ¦    Jan 11, 2017 10:36:04 AM (IST)

ಮೂಡುಬಿದಿರೆ: ಐಎಲ್ಎಂ ಫೇಶಿಯಲ್ ಪರ್ಫಾಮೆನ್ಸ್ ಸಾಲ್ವಿಂಗ್ ಸಿಸ್ಟಂ ಎಂಬ ತಂತ್ರಜ್ಞಾನದ ವಿಯಾಸಕ್ಕಾಗಿ ಮೂಡುಬಿದಿರೆ ಕಡಂದಲೆ ಮೂಲದ ಕಿರಣ್ ಭಟ್ ಗೆಆಸ್ಕರ್ ತಂತ್ರಜ್ಞಾನ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

Kiran Bhat, 8th Indian to bag Oscars has his roots in Moodabidri-1ಅಕಾಡೆಮಿ ಆಫ್ ಮೋಶನ್ ಪಿಕ್ಟರ್ ಆಟ್ಸ್ ಎಂಡ್ ಸೈನ್ಸಸ್ ಜ.4ರಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡುತ್ತಿದೆ. ಕಿರಣ್ ಭಟ್ ಮೂಡುಬಿದಿರೆ ಸಮೀಪದ ಕಡಂದಲೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಬಳಿಯ, ಸಧ್ಯ ಕೊಯಮುತ್ತೂರಿನಲ್ಲಿ ನೆಲೆಸಿರುವ ಶ್ರೀನಿವಾಸ್ ಭಟ್-ಜಯಶ್ರೀ ದಂಪತಿಯ ಪುತ್ರ.