ವಾಟ್ಸ್ ಆ್ಯಪ್ ಆಡ್ಮಿನ್ ಸಹಿತ ಇಬ್ಬರ ಸೆರೆ

ವಾಟ್ಸ್ ಆ್ಯಪ್ ಆಡ್ಮಿನ್ ಸಹಿತ ಇಬ್ಬರ ಸೆರೆ

HSA   ¦    Jan 12, 2018 05:01:17 PM (IST)
ವಾಟ್ಸ್ ಆ್ಯಪ್ ಆಡ್ಮಿನ್ ಸಹಿತ ಇಬ್ಬರ ಸೆರೆ

ಮಂಗಳೂರು: ಮಹಿಳೆಯ ಬಗ್ಗೆ ತುಂಬಾ ಅವಹೇಳನಕಾರಿಯಾಗಿ ಸಂದೇಶ ಬರೆದು ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ವಾಟ್ಸ್ ಆ್ಯಪ್ ಸಂದೇಶಗಳನ್ನು ರವಾನಿಸಿದ್ದ ಇಬ್ಬರನ್ನು ಬಂಟ್ವಾಳ ಪೊಲೀಸರು ಸೆರೆ ಹಿಡಿದಿದ್ದಾರೆ.

ಬಂಟ್ವಾಳ ನಿವಾಸಿಯಾಗಿರುವ ಕೆಎಸ್ ಆರ್ ಟಿಸಿ ಬಸ್ ಚಾಲಕ ಬಾಲಕೃಷ್ಣ ಪೂಜಾರಿ ಮತ್ತು ಸತೀಶ್ ಬಂಧಿತರು. ಸತೀಶ್ ವಾಟ್ಸ್ ಆ್ಯಪ್ ಗುಂಪೊಂದರ ಆಡ್ಮಿನ್ ಆಗಿರುವನು ಎಂದು ದಕ್ಷಿಣ ಕನ್ನಡ ಎಸ್ ಪಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಮತೀಯ ದ್ವೇಷ ಸೃಷ್ಟಿ ಯತ್ನ, ಸಮಾಜದಲ್ಲಿ ಶಾಂತಿ ಕದಡಲು ಪ್ರಯತ್ನ ಮತ್ತು ಮಹಿಳೆಯ ಘನತೆಗೆ ಧಕ್ಕೆ ತರಲು ಯತ್ನಿಸಿದ ಪ್ರಕರಣ ದಾಖಲಾಗಿದೆ ಎಂದು ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.