ಬೆಳ್ತಂಗಡಿ: ಶಾಲೆಯಿಂದ ವಾಪಾಸ್ಸಾಗುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕ!

ಬೆಳ್ತಂಗಡಿ: ಶಾಲೆಯಿಂದ ವಾಪಾಸ್ಸಾಗುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕ!

YK   ¦    Mar 12, 2018 08:15:42 PM (IST)
ಬೆಳ್ತಂಗಡಿ: ಶಾಲೆಯಿಂದ ವಾಪಾಸ್ಸಾಗುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕ!

ಬೆಳ್ತಂಡಿ: ಧರ್ಮಸ್ಥಳ ಠಾಣೆಯಲ್ಲಿ ಫೋಕ್ಸೋ ಪ್ರಕರಣವೊಂದು ದಾಖಲಾಗಿದೆ. ಸ್ಥಳೀಯ ಜಾತ್ರೆ ಸಂದರ್ಭ ಯುವಕನೋರ್ವ ಬಾಲಕಿಯೊಬ್ಬಳನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಇದಾದ ಎರಡು ತಿಂಗಳ ಬಳಿಕ ಶಾಲೆಯಿಂದ ತಮ್ಮನ ಜೊತೆ ಮನೆಗೆ ಬರುತ್ತಿದ್ದಾಗ ಬೈಕಿನಲ್ಲಿ ಬಂದ ಅದೇ ಯುವಕ ತಡೆದು ನಿಲ್ಲಿಸಿ ಸನಿಹದ ಗುಡ್ಡೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಯ ಶೋಧವನ್ನು ಪೋಲಿಸರು ನಡೆಸುತ್ತಿದ್ದಾರೆ.