ತುಳು ಲಿಪಿ ಶಿಕ್ಷಕ ಬಿ.ತಮ್ಮಯ್ಯ ವಿಧಿವಶ

ತುಳು ಲಿಪಿ ಶಿಕ್ಷಕ ಬಿ.ತಮ್ಮಯ್ಯ ವಿಧಿವಶ

MV   ¦    Sep 11, 2019 09:20:48 AM (IST)
ತುಳು ಲಿಪಿ ಶಿಕ್ಷಕ ಬಿ.ತಮ್ಮಯ್ಯ ವಿಧಿವಶ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್ ಕೈಕುಂಜೆ ಪೂರ್ವ ಬಡಾವಣೆ ನಿವಾಸಿ ತುಳು ಲಿಪಿ ಶಿಕ್ಷಕ, ಕಸಾಪ ಮಾಜಿ ತಾಲೂಕು ಅಧ್ಯಕ್ಷ, ಯುವವಾಹಿನಿ ಬಂಟ್ವಾಳ ಸ್ಥಾಪಕಾಧ್ಯಕ್ಷ ಬಿ.ತಮ್ಮಯ್ಯ (71) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.

ಇವರಿಗೆ ಪತ್ನಿ, ಪುತ್ರ ಇದ್ದಾರೆ. ಸುದೀರ್ಘ ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ಗ್ರಾಮ ಕರಣಿಕರಾಗಿ, ಪ್ರಥಮ ದರ್ಜೆ ಸಹಾಯಕರಾಗಿ, ಕಂದಾಯ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸಿ ನಿವೃತ್ತರಾದ ಅವರು, ಸರಕಾರಿ ನೌಕರರ ಸಂಘ, ಬಂಟ್ವಾಳ ತಾಲೂಕು ಯುವವಾಹಿನಿಯ ಸ್ಥಾಪಕಾಧ್ಯಕ್ಷರಾಗಿ, ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಿಂದಿರುಗಿ ನೋಡಿದಾಗ ಆತ್ಮಚರಿತ್ರೆ, ಸಹಿತ ಆರು ಕವನ ಸಂಕಲನ, ಕಥೆ, ಲೇಖನ, ಕಥಾಸಂಕಲನಗಳನ್ನು ರಚಿಸಿರುವ ಅವರು, ನಿವೃತ್ತಿಯಾದ ಬಳಿಕ ತುಳು ಲಿಪಿಯನ್ನು ಆಸಕ್ತರಿಗೆ ಕಲಿಸುವ ಮೂಲಕ ಪ್ರಸಿದ್ಧರಾಗಿದ್ದರು. ಹಾಳೆ ಚಪ್ಪಲಿಯನ್ನು ರಚಿಸಿ, ಗಮನ ಸೆಳೆದಿದ್ದ ಅವರು, ಹಲವು ಸಾಮಾಜಿಕ ಚಟುವಟಿಕೆಗಳಲ್ಲ ಸಕ್ರಿಯರಾಗಿದ್ದರು.