ಕುಡಿದು ಬಿಲ್ ಹಣ ನೀಡದ ಕ್ರೀಡಾಪಟುವಿಗೆ ಹಲ್ಲೆ: ಮೂವರ ಬಂಧನ

ಕುಡಿದು ಬಿಲ್ ಹಣ ನೀಡದ ಕ್ರೀಡಾಪಟುವಿಗೆ ಹಲ್ಲೆ: ಮೂವರ ಬಂಧನ

DSK   ¦    Dec 06, 2018 07:34:18 PM (IST)
ಕುಡಿದು ಬಿಲ್ ಹಣ ನೀಡದ ಕ್ರೀಡಾಪಟುವಿಗೆ ಹಲ್ಲೆ: ಮೂವರ ಬಂಧನ

ಮೂಡುಬಿದಿರೆ: ರಾಜಸ್ತಾನದ ಕ್ರೀಡಾಪಟುವೋರ್ವ ಬಾರ್‍ ನಲ್ಲಿ ಕುಡಿದು ಬಿಲ್ ನೀಡದೆ ಹೋಗಲೆತ್ನಿಸಿದಕ್ಕೆ ಆತನ ಮೇಲೆ ಹಲ್ಲೆ ನಡೆಸಿದ ಮೂವರು ವೈಟರ್‍ ಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ತಾನದ ಚೂರ್ ಜಿಲ್ಲೆಯ ಅಜಯ್(21) ಹಲ್ಲೆಗೊಳಗಾದ ಕ್ರೀಡಾಪಟು ಎಂದು ತಿಳಿದುಬಂದಿದೆ. ಪೇಟೆಯ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಬಾರ್‍ ನಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಸ್ವರಾಜ್ಯ ಮೈದಾದಲ್ಲಿ ನಡೆದ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅರ್ಧದಲ್ಲಿ ಹೊರಬಿದ್ದ ರಾಜಸ್ತಾನದ ಕ್ರೀಡಾಪಟುಗಳ ತಂಡವೊಂದು ರಾತ್ರಿ ಮದ್ಯ ಸೇವೆನೆಗೆ ಬಾರ್‍ ಗೆ ಬಂದಿತ್ತು. ಕುಡಿದು, ತಿಂದ ಪರಿಣಾಮ ರೂ 2600 ಬಿಲ್ ಬಂತ್ತೆನ್ನಲಾಗಿದೆ. ಜತೆಯಲ್ಲಿದ್ದವರು ಎದ್ದು ಹೋದ ನಂತರ ಅಲ್ಲಿ ಉಳಿದದ್ದು ಒಬ್ಬ ಕ್ರೀಡಾಪಟು ಮಾತ್ರ ಎನ್ನಲಾಗಿದೆ. ಬಿಲ್ ನೋಡಿ ಕಂಗಾಲಾದ ಕ್ರೀಡಾಪಟು ಬಿಲ್ ಪಾವತಿಗೆ ತನ್ನ ಸ್ನೇಹಿರತ್ತ ಬೊಟ್ಟು ಮಾಡಿದಲ್ಲದೆ ವೈಟರೊಂದಿಗೆ ತಗಾದೆ ಎತ್ತಿದ ಎನ್ನಲಾಗಿದೆ.

ಈ ವೇಳೆ ಗಿರಾಕಿ ಮತ್ತು ವೈಟರ್ ಮಧ್ಯೆ ಮಾತಿನ ಚಕಾಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೇರಿ ಪರಸ್ಪರ ತಳ್ಳಾಟ ನಡೆದು ವೈಟರೊಬ್ಬರು ಕಬ್ಬಿಣದ ರಾಡ್‍ನಿಂದ ಗಿರಾಕಿಗೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆಂದು ಹಲ್ಲೆಗೊಳಗಾದ ಕ್ರೀಡಾಪಟು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಬಾರ್‍ ನ ಮೂವರು ವೈಟರ್‍ ಗಳನ್ನು ಪೊಲೀಸರು ಬಂಧಿಸಿ ಕೋರ್ಟ್‍ಗೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.