ಕರಾವಳಿಯಲ್ಲಿ ಮೊದಲ ಬಾರಿ ಪತ್ತೆಯಾದ ಕಪ್ಪೆಗೆ ಮಂಗಳೂರಿನ ಹೆಸರು

ಕರಾವಳಿಯಲ್ಲಿ ಮೊದಲ ಬಾರಿ ಪತ್ತೆಯಾದ ಕಪ್ಪೆಗೆ ಮಂಗಳೂರಿನ ಹೆಸರು

YK   ¦    May 17, 2018 02:43:38 PM (IST)
ಕರಾವಳಿಯಲ್ಲಿ ಮೊದಲ ಬಾರಿ ಪತ್ತೆಯಾದ ಕಪ್ಪೆಗೆ ಮಂಗಳೂರಿನ ಹೆಸರು

ಬೆಂಗಳೂರು: ರಾಜ್ಯದ ಸಂಶೋಧಕರ ತಂಡವು ದೇಶದ ಪಶ್ಚಿಮ ಕರಾವಳಿಯಲ್ಲಿ ಪತ್ತೆ ಹಚ್ಚಿದ ಮೈಕ್ರೊಹೈಲಾ ಎಂಬ ಪ್ರಭೇಧಕ್ಕೆ ಸೇರಿದ ಹೊಸ ಪ್ರಭೇದದ ಕಪ್ಪೆಗೆ ಮಂಗಳೂರಿನ ಹೆಸರನ್ನು ಇಟ್ಟಿದ್ದಾರೆ.

ಈ ಕಪ್ಪೆ ಮೊದಲ ಬಾರಿಗೆ ಮಂಗಳೂರಿನ ಪರಿಸರದಲ್ಲಿ ಕಾಣಿಸಿಕೊಂಡ ಕಾರಣ ಇದಕ್ಕೆ ಮೈಕ್ರೊಹೈಲಾ ಕೊಡಿಯಾಲ್ ಎಂದು ಹೆಸರಿಟ್ಟಿದ್ದಾರೆ. ಇನ್ನೂ ಕೊಡಿಯಾಲ್ ಎಂದರೆ ಕೊಂಕಣಿಯಲ್ಲಿ ಮಂಗಳೂರು ಎಂದರ್ಥ. ಈ ಕಪ್ಪೆ ಮೈಕ್ರೊಹೈಲಾ ಕುಟುಂಬದ ಕಪ್ಪೆಗಳ 10ನೇ ಪ್ರಭೇದವಿದು.

ಈ ಸಂಶೋಧನೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಆನ್ವಯಿಕ ಜೀವವಿಜ್ಞಾನ ವಿಭಾಗದ ಕೆ.ವಿನೀತ್‌ ಕುಮಾರ್‌, ಯು.ಕೆ.ರಾಧಾಕೃಷ್ಣನ್‌, ಕೆ.ರಾಜಶೇಖರ್‌ ಪಾಟೀಲ, ಸೇಂಟ್‌ ಅಲೋಷಿಯಸ್‌ ಪದವಿ ಪೂರ್ವಕಾಲೇಜಿನ ಆರ್.ಡಿ.ಗಾಡ್ವಿನ್‌, ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕಾಲಜಿ ಆ್ಯಂಡ್‌ ದಿ ಎನ್‌ವಿರಾನ್‌ಮೆಂಟ್‌ (ಎಟಿಆರ್‌ಇಇ) ಸಂಸ್ಥೆಯ ಸೂರಿ ಸೆಹಗಲ್‌ ಜೀವವೈವಿಧ್ಯ ಮತ್ತು ಸಂರಕ್ಷಣಾ ಕೇಂದ್ರದ ಅನ್ವೇಷಾ ಸಾಹ, ಎನ್‌.ಎ.ಅರವಿಂದ ತಂಡ ಸಂಶೋಧನೆಯನ್ನು ನಡೆಸಿದೆ. ಇದಕ್ಕೆ ಸಂಬಂಧಪಟ್ಟ ಲೇಖನವೊಂದು ಅಂತರರಾಷ್ಟ್ರೀಯ ನಿಯತಕಾಲಿಕೆ ‘ಝೂಟ್ಯಾಕ್ಸಾ’ದಲ್ಲಿ ಈ ಕುರಿತ ಸಂಶೋಧನಾ ಲೇಖನ ಪ್ರಕಟವಾಗಿದೆ.