ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಿ ಜೆ ಸಿಮೋನ್ ಅಧಿಕಾರ ಸ್ವೀಕಾರ

ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಿ ಜೆ ಸಿಮೋನ್ ಅಧಿಕಾರ ಸ್ವೀಕಾರ

SK   ¦    Jan 11, 2017 11:10:36 AM (IST)

ಕಾಸರಗೋಡು: ಜಿಲ್ಲಾ  ನೂತನ ಪೊಲೀಸ್ ವರಿಷ್ಠಾಧಿಕಾರಿ ಸಿ ಜೆ  ಸಿಮೋನ್  ಅಧಿಕಾರ ವಹಿಸಿಕೊಂಡಿದ್ದು, ಥೋಮ್ಸನ್ ಜೋಸ್  ರವರನ್ನು ವರ್ಗಾಹಿಸಿ ಸಿಮೋನ್ ರವರನ್ನು ನಿಯುಕ್ತಿಗೊಳಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ   ಥೋಮ್ಸನ್ ಜೋಸ್ ರವರು ಸಿಮೋನ್ ರವರಿಗೆ ಅಧಿಕಾರ ಹಸ್ತಾ೦ತರಿಸಿದರು.

ತೊಡುಪುಳ ನಿವಾಸಿ ಯಾಗಿರುವ ಸಿಮೋನ್   ಈ ಹಿಂದೆ ಕೊಟ್ಟಾಯಂ ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಹೆಚ್ಚುವರಿ ಹೊಣೆ ಬಳಿಕ  ತ್ರಿಶ್ಯೂರು  ಸಿಟಿ ಪೊಲೀಸ್ ಆಯುಕ್ತ , ಎರ್ನಾಕುಲಂ ಅಪರಾಧ ಪತ್ತೆದಳದ ಮುಖ್ಯಸ್ಥರಾಗಿಯೂ  ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಉತ್ತಮ ಸೇವೆಗೈದಿರುವ ರಾಷ್ಟ್ರಪತಿಯವರ ಪೊಲೀಸ್ ಪದಕಕ್ಕೂ ಅರ್ಹರಾಗಿದ್ದಾರೆ. ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಥೋಮ್ಸನ್  ಜೋಸ್ ರವರನ್ನು ವರ್ಗಾಹಿಸಿದ್ದರೂ ಬದಲಿ ಸ್ಥಾನ ನೀಡಿಲ್ಲ.